ಕೆಆರ್‌ಎಸ್ ಕಾಲೇಜಿಗೆ ನ್ಯಾಕ್‌ನಿಂದ ಬಿ ಗ್ರೇಡ್

1675249050699
ಕೆ.ಆರ್.ಸಾಗರd ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರನೋಟ.
Published on

ಕೆ.ಆರ್.ಸಾಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ನಿಂದ ಬಿ ಗ್ರೇಡ್ ದೊರೆತಿದೆ.


ಜನವರಿ 24 ಹಾಗೂ 25ರಂದು ಮದನ್ ಮೋಹನ್ ಗೋಯಲ್ ನೇತೃತ್ವದಲ್ಲಿನ ನ್ಯಾಕ್ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರ ಜತೆ ಸಂವಾದ ನಡೆಸಿತ್ತು. ಇದೀಗ ನ್ಯಾಕ್‌ನಿಂದ ಫಲಿತಾಂಶ ಪ್ರಕಟವಾಗಿದ್ದು, 2.43 ಅಂಕಗಳೊಂದಿಗೆ ಬಿಗ್ರೇಡ್ ಪಡೆದಿದೆ ಎಂದು ಪ್ರಭಾರ ಪ್ರಾಂಶುಪಾಲ ನಂಜೇಗೌಡ ತಿಳಿಸಿದ್ದಾರೆ.


ಫಲಿತಾಂಶ ಪಡೆಯಲು ಕಾಲೇಜಿನ ಅಭಿವೃದ್ಧಿಗೆ ಉತ್ತಮ ನಿರ್ವಹಣೆ ಮಾಡಿದ ನಿಕಟಪೂರ್ವ ಪ್ರಾಂಶುಪಾಲ ಮಂಜುರಾಜು ಹಾಗೂ ಉಪನ್ಯಾಸಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net