ಕೆಂಭಾವಿ-ರಾಯಚೂರು ಬಸ್ ಆರಂಭ

26 kem 2
Published on

ಕೆAಭಾವಿ: ನೂತನವಾಗಿ ಕೆಂಭಾವಿ-ರಾಯಚೂರು ಬಸ್ ಬುಧವಾರ ಆರಂಭಿಸಲಾಯಿತು. ಈ ವೇಳೆ ಬಸ್‌ಗೆ ಪೂಜೆ ಸಲ್ಲಿಸಿದ ನಂತರ ಚಾಲಕ ನಿರ್ವಾಹಕರಿಗೆ ಸನ್ಮಾನಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ರಹೆಮಾನ್ ಪಟೇಲ್ ಯಲಗೋಡ, ಪಟ್ಟಣದಿಂದ ರಾಯಚೂರು ನಗರಕ್ಕೆ ನೇರವಾಗಿ ಬಸ್ ಸಂಪರ್ಕ ಕಲ್ಪಿಸುವ ಕುರಿತು ಈ ಭಾಗದ ಜನರ ಬಹುದಿಗಳ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸದ ಕುಮಾರ ನಾಯಕ್ ಅವರು ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಜನರ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದರು.

ಕೆAಭಾವಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಮಾತನಾಡಿ, ಪಟ್ಟಣದಲ್ಲಿ ಎರಡು ಪದವಿ ಮಹಾ ವಿದ್ಯಾಲಯಗಳಿದ್ದು, ಈಗ ಅದು ರಾಯಚೂರಿನ ಮಹಷಿ ವಾಲ್ಮೀಕಿ ವಿಶ್ವ ವಿದ್ಯಾಲಯಕ್ಕೆ ಒಳಪಡುತ್ತಿದ್ದು ಈ ನೇರ ಬಸ್ ಸಂಚಾರದಿAದ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶ್ರೀ ಚನ್ನಯ್ಯಸ್ವಾಮಿ ಚಿಕ್ಕಮಠ ಸಾನ್ನಧ್ಯ ವಹಿಸಿದ್ದರು. ಸಂಚಾರ ನಿಯಂತ್ರಕ ಮಾನಪ್ಪ, ಪುರಸಭೆ ಸದಸ್ಯರಾದ ಮಲ್ಲಿನಾಥಗೌಡ ಪೊಲೀಸ್ ಪಾಟೀಲ್, ರವಿ ಸೊನ್ನದ, ಮಾಜಿ ಸದಸ್ಯ ರಾಘವೇಂದ್ರ ದೇಶಪಾಂಡೆ, ನೂರೂಲ್ಲಾಖಾನ್ ಬಾಬಾ, ಇಲಿಯಾಸ್ ನಾಲತವಾಡ, ರಂಗಪ್ಪ ವಡ್ಡರ್, ಹನೀಫ್ ಸಾಸನೂರ, ಆದಮ್ ಖಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net