

ಮದ್ದೂರು: ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸಿ.ಎನ್. ಕೆಂಪೇಗೌಡ ಹಾಗೂ ಉಪಾಧ್ಯಕ್ಷರಾಗಿ ಎಂ. ಸವಿತಾ ಬೋರೇಗೌಡ ಅವಿರೋಧವಾಗಿ ಆಯ್ಕೆಯಾದರು.
ಮುತ್ತುರಾಜು ಅಧ್ಯಕ್ಷ ಸ್ಥಾನಕ್ಕೆ, ಈರೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಸಿ.ಎನ್. ಕೆಂಪೇಗೌಡ ಹಾಗೂ ಸವಿತಾ ಬೋರೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಪಾರ್ವತಮ್ಮ ಘೋಷಣೆ ಮಾಡಿದರು.ಸಂಘದ ನಿರ್ದೇಶಕರಾದ ಎಂ.ಎಸ್. ಸಿದ್ದಮರಿ, ಈರೇಗೌಡ, ಸಿದ್ದರಾಮು, ಕೆ.ಎಂ.ಕೃಷ್ಣೇಗೌಡ, ಕೆ.ಬಿ.ಸಿದ್ದೇಗೌಡ, ಬಿ.ಎಸ್.ಮಧು, ದಾಸನಾಯಕ, ಡಿ.ಸಿ.ಮಹದೇವಯ್ಯ, ಗೌರಮ್ಮ, ಕೃಷ್ಣಪ್ಪ, ಬ್ಯಾಂಕ್‌ನ ಸಿಇಒ ಶಿವಕುಮಾರ್ ಇದ್ದರು.