ಕೆಂಪೇಗೌಡ ಜಯಂತಿ ಯಶ್ವಸಿಗೊಳಿಸಿ

25blrp1
Published on

ಬೇಲೂರು:ಹಾಸನದಲ್ಲಿ ಜೂ.27 ರಂದು ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಕುಲಬಾಂಧವರು ಆಗಮಿಸಿ ಯಶಸ್ವಿಗೊಳಿಸುವಂತೆ ಕೆಂಪೇಗೌಡ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಎಂ.ಎ.ನಾಗರಾಜ್ ಮನವಿ ಮಾಡಿದರು.


ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೇಲೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಇದ್ದು ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿ ಕಾರ್ಯಕ್ರಮ ಆಗಬೇಕಾಗಿತ್ತು. ಆದರೆ ಸರ್ಕಾರದ ನಿರ್ದೇಶನದಂತೆ ರಾಜ್ಯ ಮಟ್ಟದ ಕೆಂಪೇಗೌಡರ ಜಯಂತಿಯನ್ನು ಹಾಸನದಲ್ಲಿ ಅದ್ದೂರಿಯಾಗಿ ಮಾಡುತ್ತಿರುವುದರಿಂದ ಈ ಬಾರಿ ತಾಲೂಕಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಸೇವಾ ಸಮಿತಿ, ಕೆಂಪೇಗೌಡ ಯುವ ವೇದಿಕೆ, ತಾಲೂಕು ಒಕ್ಕಲಿಗರ ಯುವ ವೇದಿಕೆ ಹಾಗೂ ತಾಲೂಕು ಒಕ್ಕಲಿಗರ ಮಹಿಳಾ ಘಟಕದಿಂದ ಸರಳವಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಮೆರವಣಿಗೆಯೊಂದಿಗೆ ಯಗಚಿ ಸೇತುವೆ ಸಮೀಪದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ತಾಲೂಕು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಹಾಸನಕ್ಕೆ ತೆರಳಲಾಗುವುದು ಎಂದರು.


ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬಿ.ಡಿ.ಚಂದ್ರೇಗೌಡ, ಕೆಂಪೇಗೌಡ ಯುವ ವೇದಿಕೆಯ ತಾಲೂಕು ಅಧ್ಯಕ್ಷ ಬಸವರಾಜು, ಒಕ್ಕಲಿಗರ ಯುವ ವೇದಿಕೆಯ ತಾಲೂಕು ಅಧ್ಯಕ್ಷ ಪೃಥ್ವಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿಗೌಡ, ಕೆಂಪೇಗೌಡ ಸೇವಾ ಸಮಿತಿ ಸದಸ್ಯರಾದ ರಮೇಶ್, ಪೈಂಟ್ ರವಿ, ಒಕ್ಕಲಿಗ ಸಂಘದ ಅರುಣ್ ಕುಮಾರ್, ನಾರಾಯಣ, ಪ್ರದೀಪ್, ವಿಶ್ವನಾಥ್, ಎಂ.ಡಿ.ದಿನೇಶ್, ಗಣೇಶ್, ನಾಗೇಶ್, ಅಣ್ಣಪ್ಪ, ಮುದ್ದಮ್ಮ, ಭಾಗ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net