

ಚಿಕ್ಕಮಗಳೂರು: ದೇವರ ದೃಷ್ಟಿಯಲ್ಲಿ ಎಲ್ಲ ಭಕ್ತರೂ ಒಂದೇ. ಧರ್ಮ ಯಾವುದಾದರೇನು ಮಾನವೀಯತೆಯು ಇದ್ದರೆ ಎಲ್ಲರೂ ಪ್ರೀತಿಯಿಂದ ಬದುಕಬಹುದು ಎಂದು ಶಿವಚಿಂತಕಿ ಸುಶೀಲಮ್ಮ ತಿಳಿಸಿದರು.
ನಗರದ ಕೆಂಪನಹಳ್ಳಿಯ ಕತ್ರಿಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ `ಕೆಂಪನಹಳ್ಳಿ ಅಧಿದೇವತೆ ಭಕ್ತಿಗೀತೆಯ ವೀಡಿಯೋವನ್ನು ಆನ್‌ಲೈನ್‌ಗೆ ಇಂಡೀಕರಿಸಿ ಮಾತನಾಡಿದರು.
ಕತ್ರಿಮಾರಮ್ಮ ಎಂದೂ ಭಕ್ತಿಗೆ ಒಲಿಯುತ್ತಾಳೆ. ಪ್ರತಿ ಮಾನವರಲ್ಲೂ ದೈವತ್ವವನ್ನು ಕಾಣುವುದು ನಿಜ ಭಕ್ತರ ಧರ್ಮವಾಗಬೇಕು. ಎಲ್ಲ ಧರ್ಮಗಳ ಸಾರವೂ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಭರತ ಕಲಾಕ್ಷೇತ್ರದ ಪ್ರಧಾನ ಗುರು ವೀಣಾ ಅರವಿಂದ್ ಮಾತನಾಡಿ, ಸಂಗೀತವು ದೈವಿಕ ಕಲೆಯಾಗಿದ್ದು, ಇದು ಮನಃಶಾಂತಿಗೆ ಮೂಲ ನೆಲೆಯಾಗಿದೆ. ಸಂಗೀತಕ್ಕೆ ಶರಣಾದವರು ಸಾತ್ವಿಕ ಗುಣವನ್ನು ರೂಢಿಸಿಕೊಂಡು ಸಮಾಜದಲ್ಲಿ ಸಮನ್ವಯತೆ ಸಾಧಿಸುತ್ತಾರೆ. ಈ ದಿಸೆಯಲ್ಲಿ ರೇಖಾ ನಾಗರಾಜರಾವ್ ಅವರು ನಿರ್ಮಿಸುತ್ತಿರುವ ಕಲ್ಕಟ್ಟೆ ಗಾನ ದೀವಿಗೆಯು ಅನುಕರಣೀಯ ಮಾದರಿಯಾಗಿದೆ. ಶ್ರದ್ಧಾ ಕೇಂದ್ರಗಳಿಗೆ ಅವುಗಳz್ದೆÃ ಆದ ಒಂದಷ್ಟು ಗೀತೆಗಳಿದ್ದರೆ ಅವು ಹೆಮ್ಮೆಯ ದ್ಯೋತಕ ಎಂದರು.
ಗೀತೆಯನ್ನು ಹಾಡಿದ ಗಾಯಕಿ ರುಕ್ಸಾನಾ ಕಾಚೂರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರಧಾನ ಸಂಸ್ಕೃತಿಯೇ ದೈವಾರಾಧನೆ. ಇಂದು ಗ್ರಾಮದ ಭಕ್ತರ ನಡುವೆ ನಡೆದ ಈ ಸನ್ಮಾನ ನಿಜಕ್ಕೂ ದೇವರ ಕೃಪೆ ಎಂದರು.
ನಾಗರಾಜರಾವ್ ಕಲ್ಕಟ್ಟೆ ರಚಿಸಿ, ರಾಗ ಸಂಯೋಜಿಸಿ ರುಕ್ಸಾನಾರೊಂದಿಗೆ ಹಾಡಿದ ಈ ಗೀತೆಗೆ ಕೆ.ಎನ್.ನಾಗಭೂಷಣ್ ಅವರ ಧ್ವನಿಗ್ರಹಣ, ಸಂಕಲನ ಹಾಗೂ ಹಿನ್ನೆಲೆ ಸಂಗೀತವಿದೆ. ಸಮಾರಂಭದಲ್ಲಿ ದೇವಾಲಯದ ಪ್ರಮುಖರು. ಗ್ರಾಮದ ಹಿರಿಯರು, ಗಾಯಕಿ ಅನುಷ ಅಂಚನ್, ನಾಟಿವೈದ್ಯೆ ಶಾಂತ ಮಲ್ಲೇಶರಾವ್, ಸ್ಪೆÊಸಸ್ ಬೋರ್ಡ್ನ ನಿವೃತ್ತ ಅಧಿಕಾರಿ ರೊನಾಲ್ಡ್, ಕನ್ನಡಸೇನೆಯ ಜಯಪ್ರಕಾಶ್, ರಮೇಶ್ ಬೊಂಗಾಳೆ, ಹಿರೇಮಗಳೂರು ರಾಕೇಶ್ ಉಪಸ್ಥಿತರಿದ್ದರು. ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿದರು. ಕೆಂಪನಹಳ್ಳಿ ನವೀನ್ ನಿರೂಪಿಸಿದರು. ರೇಖಾ ನಾಗರಾಜರಾವ್ ವಂದಿಸಿದರು.