

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ನಂದನ ಹೊಸೂರು ಗ್ರಾಮದ ಗ್ರಾಮದೇವತೆ ಹುತ್ತದ ಕೆಂಚಮ್ಮ ದೇವಿಯ 19ನೇ ವರ್ಷದ ಆರತಿ ಭಾನೋತ್ಸವ ಮತ್ತು ಹೂವಿನ ಪಲ್ಲಕ್ಕಿ ಮಹೋತ್ಸವಕ್ಕೆ ಗ್ರಾಮದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಡಿ. 5ರಂದು ಸಂಜೆ 5ಕ್ಕೆ ದೇವಿಯ ಆರತಿ ಭಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನಂತರ ಗ್ರಾಮದ ರಾಜ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
6ರಂದು ಮುಂಜಾನೆ 5ಕ್ಕೆ ಹೂವಿನ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಬೆಳಗ್ಗೆ 10ಕ್ಕೆ ದೇವಿಯ ಸಮ್ಮುಖದಲ್ಲಿ ಅನೇಕ ಗೋರಪ್ಪರಿಂದ ದೋಣಿಸೇವೆ ಜರುಗಲಿದೆ. ದೀಪಾಲಂಕಾರ, ಭಕ್ತರಿಗೆ ಅನ್ನದಾಸೋಹ, ಅಣ್ಣಪ್ಪರಿಂದ ದೇವಿ ಮಹಾತ್ಮೆ ಭಜನೆ ಸೇರಿ ಇತರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.