ಕೆ.ಸಿ.ರೆಡ್ಡಿ ಪ್ರತಿಮೆ ಸ್ಥಾಪನೆಗೆ ಸಿಎಂ ನೆರವು

ctd 0003
Published on

ಚಿತ್ರದುರ್ಗ: ಲೋಕಸಭೆ ಟಿಕೆಟ್ ಹಂಚಿಕೆ ವೇಳೆ ರಾಜ್ಯದ ಪ್ರಮುಖ ನಾಯಕರೊಬ್ಬರು ರೆಡ್ಡಿ ಸಮುದಾಯ ಎಲ್ಲಿದೆ ಎಂದು ಕೇಳಿದ್ದಾರೆ ಅವರು ಯಾರೆಂದು ಬೆಂಗಳೂರಲ್ಲಿ ಏರ್ಪಡಿಸಲಿರುವ ಸಮುದಾಯದ ಸಭೆಯಲ್ಲಿ ಹೇಳುವುದಾಗಿ ರಾಜ್ಯರೆಡ್ಡಿ ಜನಸಂಘದ ನಿರ್ದೇಶಕ ಪ್ರಭಾ ಕರ ರೆಡ್ಡಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಬಳಿ ಸ್ಥಾಪಿಸಲು ಸಿಎಂ ಸಿದ್ದರಾಮಯ್ಯ ನೆರವಾದರು. 2017ರಲ್ಲಿ ನಡೆದ ಸಮುದಾಯದ ಸಮಾವೇಶದಲ್ಲಿ ಹೇಮ-ವೇಮ ಒಂದೇ ಎಂದು ಘೋಷಿಸುವ ಮೂಲಕ ಸ ಚಿವರಾದ ರಾಮಲಿಂಗಾರೆಡ್ಡಿ ಹಾಗೂ ಎಚ್.ಕೆ.ಪಾಟೀಲ್ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ಸ್ಮರಿಸಿದರು. ಸಂಘದ ನಿರ್ದೇಶಕ ಕೃಷ್ಣಾರೆಡ್ಡಿ,ನಾಗೇಶ್‌ರೆಡ್ಡಿ,ವಿಶ್ವನಾಥರೆಡ್ಡಿ,ದಾಸರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net