ಕೆ.ಇ. ಬೋರ್ಡ ಶಾಲಾ ತಂಡಕ್ಕೆ ಪ್ರಶಸ್ತಿ

8 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಡಾ. ಸತೀಶ ಕನ್ನಯ್ಯ ಫುಟ್ಬಾಲ್ ಕ್ಲಬ್‌ಗಳ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತರ-ಶಾಲಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇಲ್ಲಿನ ಮಾಳಮಡ್ಡಿ ಕೆ.ಇ. ಬೋರ್ಡ ಆಂಗ್ಲ ಮಾಧ್ಯಮ ಶಾಲಾ ತಂಡ ಜಯಶಾಲಿಯಾಗಿದೆ.
ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೆ.ಇ. ಬೋರ್ಡ ಆಂಗ್ಲ ಮಾಧ್ಯಮ ಶಾಲೆಯು ಜೆಎಸ್‌ಎಸ್ ಸಿಬಿಎಸ್(ವಿದ್ಯಾಗಿರಿ) ಶಾಲಾ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು. ಪಂದ್ಯದ ಏಕೈಕ ಗೋಲನ್ನು ಗಣಪತಿ ಭಟ್ 9ನೇ ನಿಮಿಷದಲ್ಲಿ ದಾಖಲಿಸಿದರು.
ಇದಕ್ಕೂ ಪೂರ್ವ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೆ.ಇ. ಬೋರ್ಡ ಆಂಗ್ಲ ಮಾಧ್ಯಮ ಶಾಲಾ ತಂಡದ ನಾಯಕ ಗಣೇಶ ಮಠಪತಿ 6 ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಜೆಎಸ್‌ಎಸ್ ಪಬ್ಲಿಕ್ ಶಾಲೆ(ಕೆಲಗೇರಿ)ಯನ್ನು ಸೋಲಿಸಿದ್ದರೆ, ಜೆಎಸ್‌ಎಸ್ ಸಿಬಿಎಸ್(ವಿದ್ಯಾಗಿರಿ) ತಂಡವು ಸೇಂಟ್ ಜೋಸೆಫ್ ಶಾಲೆಯನ್ನು 1-0 ಗೋಲಿನಿಂದ ಪರಾಭವಗೊಳಿಸಿತ್ತು.
ತಂಡದ ಸಾಧನೆಗೆ ಕೆ.ಇ. ಬೋರ್ಡಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಶ್ರೀನಿವಾಸ ಪರಾಂಡೆ, ಕ್ರೀಡಾಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಕಾಂತ ಹಣಮಂತಗಡ, ಪ್ರಾಂಶುಪಾಲ ಸ್ಮಿತಾ ಕುಲಕರ್ಣಿ, ವಿದ್ಯಾ ಸರದೇಸಾಯಿ, ದೈಹಿಕ ಶಿಕ್ಷಕರಾದ ರಾಮಚಂದ್ರ ಕಾತರಕಿ, ಮಲ್ಲಮ್ಮ ಅಲ್ಲೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net