ಕೆ.ಆರ್.ಸಾಗರದಲ್ಲಿ ಶಂಕರಚಾರ್ಯ ಜಯಂತಿ

25-04--krs2 (1)
Published on

ಕೆ.ಆರ್.ಸಾಗರ: ಗ್ರಾಮದಲ್ಲಿ ಕೆ.ಆರ್.ಸಾಗರ ಬ್ರಾಹ್ಮಣ ಮಹಾಸಭಾ ಘಟಕದಿಂದ ಶಂಕರಚಾರ್ಯ ಜಯಂತಿ ಆಚರಿಸಲಾಯಿತು.


ಗ್ರಾಮದ ಸಂತೆಮಾಳದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಅರ್ಚಕ ಶಂಕರ ಪ್ರಸಾದ್ ನೇತೃತ್ವದಲ್ಲಿ ಶಂಕರಚಾರ್ಯರ ಮೂರ್ತಿಗೆ ವಿವಿಧ ಅಭಿಷೇಕ ಮಾಡಿ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.


ನಂತರ ಶಂಕರಚಾರ್ಯರ ಭಾವಚಿತ್ರವನ್ನು ಅಲಂಕರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಸತೀಶ್ ಬಾಬು, ರವಿಶಂಕರ್, ರಾಮಕೃಷ್ಣ, ಜಯರಾಂ, ರಾಮದಾಸ್, ನಾಗಲಕ್ಷ್ಮೀ ಪ್ರಸಾದ್, ಎಚ್.ಎ.ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net