ಕೆ.ಆರ್.ಸಾಗರದಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ

05-11-krs1 (1)
ಕೆ.ಆರ್.ಸಾಗರದಲ್ಲಿ ಶನಿವಾರ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಪ್ರಯುಕ್ತ ಗ್ರಾಮದ ಅರಳಿಕಟ್ಟೆ ಬಳಿ ಗ್ರಾಮದ ಇತಿಹಾಸವುಳ್ಳ ದೇವಸ್ಥಾನದ ಮೃತ್ತಿಕೆಗಳನ್ನು ಸಂಗ್ರಹಿಸಿ ವಾಹನಕ್ಕೆ ನೀಡಲಾಯಿತು.
Published on

ಕೆ.ಆರ್.ಸಾಗರ: ಕೆ.ಆರ್.ಸಾಗರದಲ್ಲಿ ಶನಿವಾರ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಪ್ರಯುಕ್ತ ಗ್ರಾಮದ ಅರಳಿಕಟ್ಟೆ ಬಳಿ ಗ್ರಾಮದ ಇತಿಹಾಸವುಳ್ಳ ದೇವಸ್ಥಾನದ ಮೃತ್ತಿಕೆಗಳನ್ನು ಸಂಗ್ರಹಿಸಿ ನೀಡಲಾಯಿತು.

ನಾಡಪ್ರಭು ಕೆಂಪೇಗೌಡ ಪ್ರತಿಮೆ ಬಳಿಯ ನಿರ್ಮಾಣವಾಗುವ ಮಂಟಪಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನ ವಾಹನಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ, ಸ್ವ-ಸಹಾಯ ಸಂಘ, ಆಶಾ ಕಾರ್ಯಕರ್ತೆಯರ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಗ್ರಾ.ಪಂ ಅಧ್ಯಕ್ಷ ಕೆ.ನರಸಿಂಹ ನೇತೃತ್ವದಲ್ಲಿ ಮೃತ್ತಿಕೆಯನ್ನು ನೀಡಲಾಯಿತು. ಗ್ರಾ.ಪಂ ಅಧ್ಯಕ್ಷ ಕೆ.ನರಸಿಂಹ, ರಾಜಸ್ವ ನಿರೀಕ್ಷ ಉಮೇಶ್, ಗ್ರಾಮಲೆಕ್ಕಿಗ ರಮೇಶ್, ಗ್ರಾ.ಪಂ ಕಾರ್ಯದರ್ಶಿ ರಘುಜಿ, ಲೆಕ್ಕ ಸಹಾಯಕ ರವಿ, ಗ್ರಾ.ಪಂ ಸದಸ್ಯರಾದ ನಾಗೇಂದ್ರ ಕುಮಾರ್, ಜಯಂತಿ,ಪಾಪಣ್ಣ, ಮೂರ್ತಿ, ದೇವರಾಜು ಹಾಗೂ ಅಂಗನವಾಡಿ, ಆಶಾ, ಸ್ವ-ಸಹಾಯ ಸಂಘಗಳ ಕಾರ್ಯಕರ್ತೆರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net