ಕೆ.ಆರ್.ಸಾಗರಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭೇಟಿ

19-08--krs1
Published on

ಕೆ.ಆರ್.ಸಾಗರ: ಕೆ.ಆರ್.ಸಾಗರದ ವಿವಿಧ ವಾರ್ಡ್‌ಗಳು ಮತ್ತು ಶಾಲೆಗಳಿಗೆ ಶನಿವಾರ ಶಾಸಕ ರಮೇಶ ಬಂಡಿಸಿದ್ದೇಗೌಡ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
ಗ್ರಾಮದ ಜೈ ಭೀಮ್ ಕಾಲನಿ, ಬಜಾರ ಲೈನ್, ಸಂತೆಮಾಳ ಸೇರಿದಂತೆ ವಿವಿಧ ಬಡವಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ನಂತರ ಗ್ರಾಮದ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಂದ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಗ್ರಾಪಂ ಸದಸ್ಯರಾದ ದೇವರಾಜು, ರವಿಕುಮಾರ್, ಶಶಿಕಲಾ, ಸುಧಾ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಚಾರ್ಸಿ ಶಂಕರ, ವೆಂಕಟೇಶ್, ನಾರಾಯಣ, ನಾಗರಾಜು, ಹೇಮಂತಕುಮಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂಜು ಇತರರಿದ್ದರು.

ಇದಕ್ಕೂ ಮುನ್ನ ಶಾಸಕರು ಗ್ರಾಮದ ಶ್ರೀ ಸೀತಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು, ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಶಾಸಕರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net