ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿದ ಎಟಿಆರ್ ಸಹೋದರನ ಪುತ್ರ

ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿದ ಎಟಿಆರ್ ಸಹೋದರನ ಪುತ್ರ
Published on

ಅರಕಲಗೂಡು : ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರನ್ನು ಬೆಂಬಲಿಸಿ ಸ್ವಾಭಿಮಾನಿ ಪಕ್ಷ ಸೇರ್ಪಡೆ ಆಗುತ್ತಿರುವರ ಸಂಖ್ಯೆ ದಿನೇದಿನೆ ಏರುತ್ತಲೇ ಇದೆ. ಮಂಗಳವಾರ ಕೂಡ ಹಲವಾರು ಮುಖಂಡರು ಸೇರ್ಪಡೆಯಾದರು.
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎ.ಟಿ. ರಾಮಸ್ವಾಮಿ ಸಹೋದರ ಪುತ್ರ ಸುಬ್ರಹ್ಮಣ್ಯ ಅವರು ಎಂ.ಟಿ. ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿದ್ದಾರೆ. ಇವರೊಂದಿಗೆ ಬೆಂಬಲ ಸೂಚಿಸಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಘು, ಚೇತನ್ ಮುಂತಾದ ಹಲವಾರು ಪ್ರಮುಖರನ್ನು ಎಂ.ಟಿ. ಕೃಷ್ಣೇಗೌಡ ಅವರು ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಕೃಷ್ಣೇಗೌಡ ಅವರು, ವಿವಿಧ ಪಕ್ಷಗಳ ಮುಖಂಡರು ತಮಗೆ ಬೆಂಬಲ ನೀಡುತ್ತಿರುವುದು ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದೆ. ಮತದಾರರು ಗೌರವವಿಟ್ಟು ನೀಡುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.
ಮುಖಂಡ ಡಾ. ದಿನೇಶ್ ಭೈರೇಗೌಡ ಹಾಗೂ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಕೃಷ್ಣೇಗೌಡ ಸ್ವಾಭಿಮಾನಿ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಇವರನ್ನು ಕೃಷ್ಣೇಗೌಡ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net