ಕೃಷ್ಣೇಗೌಡರ ಆನೆ ನಾಟಕ ಇಂದು

Nataka
Published on

ಚಿತ್ರದುರ್ಗ: ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಡಿ. 29ರಂದು ಸಂಜೆ 6ಕ್ಕೆ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಬಿ.ಲಿಂಗಯ್ಯ ಮತ್ತು ಎಂ.ಬಸವಯ್ಯ ಪದವಿ ಪೂರ್ವ ಕಾಲೇಜು ಕನ್ನಡ ವಿಭಾಗ, ನಟನ ರಂಗಶಾಲೆಯಿಂದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪಠ್ಯವಾದ ‘ಕೃಷ್ಣೇಗೌಡರ ಆನೆ’ ಕುರಿತು ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರಚಿತ, ರಂಗಕರ್ಮಿ ಶಶಿಕಾಂತ ಯಡಹಳ್ಳಿ ರಂಗರೂಪ ನೀಡಿರುವ, ಮೇಘ ಸಮೀರ ವಿನ್ಯಾಸದ, ಮೈಸೂರಿನ ನಟನ ರಂಗಶಾಲೆ ನಿರ್ಮಾತೃ ಮಂಡ್ಯ ರಮೇಶ್ ನಿರ್ದೇಶನದ ಈ ನಾಟಕವನ್ನು ರಂಗಶಾಲೆಯ ಕಲಾವಿದರು ಪ್ರದರ್ಶಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net