ಕೃಷ್ಣಾಪುರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹ

08 yelandur 02
ಯಳಂದೂರು ತಾಲೂಕಿನ ಕೃಷ್ಣಪುರ ಗ್ರಾಮದಲ್ಲಿ ಮಳೆ ಕೊಚ್ಚಿ ಹೋಗಿರುವ ಸ್ಥಳದಲ್ಲಿ ಹಳೆಯ ಪೈಪ್ ಹಾಗೂ ಮಣ್ಣು ಹಾಕಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆ.
Published on

ಯಳಂದೂರು: ತಾಲೂಕಿನ ಕೃಷ್ಣಾಪುರ ಗ್ರಾಮದ ಗುಂಬಳ್ಳಿ ಕೆರೆಗೆ ನೀರು ಹೋಗುವ ಕಾಲುವೆಗೆ ಅಡ್ಡಲಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಎರಡು ಸೇತುವೆಗಳು ಭಾರಿ ಮಳೆಗೆ ಕೊಚ್ಚಿ ಹೋಗಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ.

ಸೇತುವೆ ಕೊಚ್ಚಿಹೋದ ಜಾಗದಲ್ಲಿ ಅಧಿಕಾರಿಗಳು ತಾತ್ಕಾಲಿಕವಾಗಿ ಹಳೆಯ ಪೈಪ್ ಹಾಕಿ ಅದರ ಮೇಲೆ ಮಣ್ಣು ಸುರಿದು ಸೇತುವೆ ಮಾಡಿ ಹೋಗಿದ್ದಾರೆ. ಆದರೆ, ತಿಂಗಳಾದರೂ ಮತ್ತೆ ಇತ್ತ ತಿರುಗಿ ನೋಡಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿರುವ ಈ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಕಾರು, ಟ್ರಾೃಕ್ಟರ್, ಗ್ಯಾಸ್ ವಾಹನ ಸೇರಿದಂತೆ ದೊಡ್ಡ ವಾಹನಗಳು ಹೋಗಲು ಆಗುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ತಕ್ಷಣ ಕ್ರಮವಹಿಸಿ ಹೊಸ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುಭದ್ರವಾಗಿಲ್ಲ: ಕೃಷ್ಣಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮಣ್ಣು, ಹಳೆಯ ಪೈಪ್ ಹಾಕಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿದೆ. ಇದು ಯಾವುದೇ ರೀತಿಯಲ್ಲಿ ಸುಭದ್ರವಾಗಿಲ್ಲ. ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದ್ದರಿಂದ ಈ ಬಗ್ಗೆ ತಾಲೂಕು ಆಡಳಿತ ತಕ್ಷಣ ಕ್ರಮವಹಿಸಿ ಹೊಸ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net