ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಮ್ಮತ ಅಗತ್ಯ

bkt-10-1 d
Published on

ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಅನುಷ್ಠಾನಕ್ಕೆ ಕೇಂದ್ರ, ರಾಜ್ಯ ಸರ್ಕಾರ ಹಾಗು ಎಲ್ಲ ಪಕ್ಷದ ಒಮ್ಮತದ ಅಭಿಪ್ರಾಯ, ಬದ್ಧತೆ ಬೇಕಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಆಗ್ರಹಿಸಿದರು.

ಯೋಜನೆ ಹಿನ್ನಡೆ, ಮುನ್ನಡೆ ಅಂತ ಭಾವಿಸುವ ಅಗತ್ಯವಿಲ್ಲ. ಮೊದಲ, ಎರಡನೇ ಹಂತದ ಯೋಜನೆಯಿಂದಾಗಿ ಲಕ್ಷಾಂತರ ಹೆಕ್ಟೇರ್ ನೀರಾವರಿ ಆಗಿದೆ. ಮೂರನೇ ಹಂತದ ಅನುಷ್ಠಾನದಿಂದ ವಿಜಯಪುರ- ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ, ರೈತರು, ಜನ ಸಾಮಾನ್ಯರ ಬದುಕು ಹಸನಗೊಳ್ಳಲಿದೆ ಎನ್ನುವುದು ಮುಖ್ಯ. ಯೋಜನೆ ಅನುಷ್ಠಾನದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆ ಅಡಗಿದೆ. ಕೃಷ್ಣೆಯ ಒಡಲಿನ ಮಕ್ಕಳ ಹಕ್ಕು ಇದೆ. ಯೋಜನೆ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದೆ. ಬೃಹತ್ ಮಟ್ಟದ ಅನುದಾನ ಇರುವ ಕಾರಣಕ್ಕೆ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಿ ಶೀಘ್ರಗತಿಯಲ್ಲಿ ಯೋಜನೆ ಜಾರಿ ಬರಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net