ಕೃಷ್ಣಾ ನದಿಗೆ ೧.೪೫ ಕ್ಯೂಸೆಕ್ ನೀರು

29-07kodekal04
Published on

ಕೊಡೇಕಲ್: ಆಲಮಟ್ಟಿ ಶಾಸ್ತಿçà ಜಲಾಶಯದಿಂದ ನಿರಂತರ ಒಳಹರಿವು ಮುಂದುವರೆದಿದ್ದು ಮಂಗಳವಾರದAದು ಬಸವಸಾಗರ ಜಲಾಶಯದ ೨೫ ಕ್ರಸ್ಟ್ಗೇಟುಗಳ ಮೂಲ ೧.೪೫೭೫೦ ಕ್ಯೂಸೆಕ್ ನೀರು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ. ಇದರಿಂದಾಗಿ ಕೃಷ್ಣಾ ನದಿಗೆ ಪ್ರವಾಹ ಉಂಟಾಗಿದ್ದು ನದಿ ತೀರದ ಗ್ರಾಮಗಳಿಗೆ ಮತ್ತೆ ಭೀತಿ ಎದುರಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಕಳೆದ ಎರಡು ದಿನಗಳಿಂದ ಆಲಮಟ್ಟಿ ಶಾಸ್ತಿçà ಜಲಾಶಯದಿಂದ ಬಸವಸಾಗರಕ್ಕೆ ಅಂದಾಜು ೧ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರಿನ ಒಳಹರಿವು ಬರುತ್ತಿದೆ. ಉಭಯ ಜಲಾಶಯಗಳಿಗೆ ನಿರಂತರವಾಗಿ ಬರುತ್ತಿರುವ ಒಳಹರಿವನ್ನು ಗಮನಿಸುತ್ತಿರುವ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕೃಷ್ಣಾ ನದಿಗೆ ನೀರನ್ನು ಹರಿಸಲಾಗುತ್ತಿದ್ದು ನಾರಾಯಣೊಉರದ ಬಸವಸಾಗರ ಜಲಾಶಯದಿಂದ ನದಿಗೆ ನೀರನ್ನು ಹರಿಸಲಾಗುತ್ತದೆ ಇದರಿಂದಾಗಿ ಮತ್ತೆ ತೀರದ ಗ್ರಾಮಗಳ ಜನತೆಗೆ ಪ್ರವಾಹ ಭೀತಿ ಎದುರಾಗಿದೆ, ಹೀಗಾಗಿ ನದಿ ತೀರದ ಗ್ರಾಮಗಳ ಜನರು ಜಾಗೃತರಾಗಿರಬೇಕು ಹಾಗೂ ನೀರಾವರಿ ಕಾಲುವೆಗಳಿಗೂ ನೀರು ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಮೂಲಗಳು ತಿಳಿಸಿವೆ.

ಗರಿಷ್ಠ ೪೯೨.೨೫ ಮೀಟರ ಎತ್ತರದಲ್ಲಿ ೩೩.೩೧೩ ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರದAದು ೪೯೧.೨೩ ಮೀಟರಗೆ, ೨೮.೭೭೯ ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊAಡಿದೆ. ತಹಸೀಲ್ದಾರ್ ಭೇಟಿ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ನದಿ ತೀರದ ಗ್ರಾಮಗಳ ಜನರು ಪ್ರವಾಹದ ಆತಂಕ ಎದುರಿಸುವಂತಾಗಿದೆ ಈ ಹಿನ್ನೆಲೆಯಲ್ಲಿ ಹುಣಸಗಿ ತಹಸೀಲ್ದಾರ್ ಎಂ.ಬಸವರಾಜ ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿದರು. ಈ ವೇಳೆ ಆಣೆಕಟ್ಟು ವಿಭಾಗದ ಅಧಿಕಾರಿಗಳಿಂದ ನೀರಿನ ಒಳಹರಿವು ಮತ್ತು ಹೊರಹರಿವಿನ ಕುರಿತಂತೆ ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಡಳಿತ ಪ್ರವಾಹ ಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದೆ. ೨ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಸಿದಾಗ ಮಾತ್ರ ನದಿತೀರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಇಲಾಖೆ ಸಿಬ್ಬಂದಿ ನದಿ ತೀರದ ಗ್ರಾಮಗಳಿಗೆ ತೆರಳಿ ಪ್ರವಾಹದ ಕುರಿತು ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ. ಮೀನುಗಾರರು ಮತ್ತು ಕುರಿಗಾಹಿಗಳು ಯಾವುದೇ ಕಾರಣಕ್ಕೂ ನದಿ ತೀರ ತೆರಳದಂತೆ ಸೂಚನೆ ನೀಡಿ ತೀವ್ರ ನಿಗಾವಹಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net