ಕೃಷ್ಣಾ ನದಿ ನೀರು ಇನಷ್ಟು ಇಳಿಕೆ

IMG-20250730-WA0003
Published on

ಕೃಷ್ಣಾ ನದಿ ನೀರು ಇನಷ್ಟು ಇಳಿಕೆ

ವಿಜಯವಾಣಿ ಸುದ್ದಿಜಾಲ,ಚಿಕ್ಕೋಡಿ

ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟç ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಜಿಲ್ಲೆಯ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಪ್ರಮಾಣ ಕಡಿಮೆಯಾಗಿ ನದಿ ತೀರದಲ್ಲಿ ಪ್ರವಾಹದ ಆತಂಕ ದೂರಾಗಿದೆ.

ಕಳೆದ ವಾರದಲ್ಲಿ ಮಳೆ ಹೆಚ್ಚಳದಿಂದ ಚಿಕ್ಕೋಡಿ ಉಪ ವಿಭಾಗದ ನದಿಗಳ ನೀರಿನ ಮಟ್ಟ ಏರಿಕೆಯಿಂದ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿತ್ತು. ಆದರೆ ಕಳೆದ ನಾಲ್ಕು ದಿನದಿಂದ ಮಳೆ ಪ್ರಮಾಣ ಕ್ಷೀಣಿಸಿದ್ದರಿಂದ  ನದಿಗಳ ನೀರಿನ ಮಟ್ಟ ಇಳಿಕೆಯಾಗಿದ್ದು, ಕೃಷ್ಣಾ ನದಿಗೆ ೫೬ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಒಳ ಹರಿವು ಕಡಿಮೆಯಾದ್ದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಮುಳುಗಡೆಯಾಗಿದ್ದ ಕೆಳ ಹಂತದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net