ಕೃಷ್ಣಪ್ಪ ಅಧ್ಯಕ್ಷ, ಪಾಟೀಲ ಪ್ರಧಾನ ಕಾರ್ಯದರ್ಶಿ

Dist Advocates Sangh photo
Published on

ಬೀದರ್: ಬೀದರ್ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಬಿ. ಕೃಷ್ಣಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಶರಣಪ್ಪ ಪಾಟೀಲ (ಪುಟ್ಟು ಪಾಟೀಲ) ಅಯ್ಕೆಯಾಗಿದ್ದಾರೆ.
ನಗರದ ಸಂಘದ ಕಚೇರಿಯಲ್ಲಿ 2022-23ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾದರು. ಆಯ್ಕೆಯಾದ ಇತರ ಪದಾಧಿಕಾರಿಗಳಲ್ಲಿ ಡಿ. ಕಂಟೆಪ್ಪ (ಉಪಾಧ್ಯಕ್ಷ), ಬಾಬುರಾವ್ ಬಿರಾದಾರ (ಜಂಟಿ ಕಾರ್ಯದರ್ಶಿ) ಹಾಗೂ ಭರತಕುಮಾರ ಗುಮ್ಮೆ (ಖಜಾಂಚಿ) ಸೇರಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಗುರುರಾಜ ಚಿಮಕೋಡೆ ಅವರು ನೂತನ ಪದಾಧಿಕಾರಿಗಳ ಆಯ್ಕೆಯನ್ನು ಪ್ರಕಟಿಸಿದರು. ಸಂಘದ ನೂತನ ಪದಾಧಿಕಾರಿಗಳಿಗೆ ವಕೀಲರು ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.

ನಾಲ್ಕನೇ ಬಾರಿ ಪ್ರಧಾನ ಕಾರ್ಯದರ್ಶಿ: ಜಿಲ್ಲಾ ವಕೀಲರ ಸಂಘಕ್ಕೆ ನಾಲ್ಕನೇ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಶಿವಶರಣಪ್ಪ ಪಾಟೀಲ (ಪುಟ್ಟು ಪಾಟೀಲ) ಗಮನ ಸೆಳೆದಿದ್ದಾರೆ. ಹಿಂದೆ ಮೂರು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಅವರು, ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷ.
ಪಾಟೀಲ ಯುವ, ಉತ್ಸಾಹಿ ವಕೀಲರಾಗಿದ್ದಾರೆ. ತಮ್ಮದೇ ಆದ ಸ್ನೇಹಿತರ ಬಳಗ ಹೊಂದಿದ್ದಾರೆ, ಹಿರಿಯ, ಕಿರಿಯ ವಕೀಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net