ಕೃಷ್ಣನ ಆದರ್ಶ ಮೈಗೂಡಿಸಿಕೊಳ್ಳಿ

hnl krishnashtami sep 6
Published on

ಹೊನ್ನಾಳಿ: ಇಂದಿನ ಆಧುನಿಕ ಜಂಜಾಟದಲ್ಲಿ ಬದುಕಿಗೆ ಶ್ರೀಕೃಷ್ಣನ ಗೀತೋಪದೇಶ ಹೆಚ್ಚು ಪ್ರಸ್ತುತವಾಗಿದೆ ಎಂದು ಉಪತಹಸೀಲ್ದಾರ್ ಸುರೇಶ್ ತಿಳಿಸಿದರು.
ಇಲ್ಲಿನ ತಾಲೂಕಾಡಳಿತ ಕಚೇರಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರಣದಿಂದಲೇ ಜೀವನದ ಎಲ್ಲ ಸಂದರ್ಭದಲ್ಲೂ ಅರ್ಜುನನಿಗೆ ಶ್ರೀಕೃಷ್ಣ ಉಪದೇಶಿಸಿದ ಗೀತೋಪದೇಶವನ್ನು ಉಲ್ಲೇಖಿಸುತ್ತಾರೆ ಎಂದು ಹೇಳಿದರು.
ಮಹಾಭಾರತದಲ್ಲಿ ಬರುವ ಕರುಕ್ಷೇತ್ರದಲ್ಲಿ ಪಾಂಡವರಿಗೂ ಹಾಗೂ ಕೌರವರಿಗೂ ನಡೆದ ಸಂಹಾರದಲ್ಲಿ ಕೃಷ್ಣ ಪಾಂಡವರ ಪರವಾಗಿ ನಿಂತು ಧರ್ಮವನ್ನು ಸಂರಕ್ಷಿಸಿದ, ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಿದ ಕೃಷ್ಣನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ವಿವಿಧ ಶಾಲೆ, ಕೆಲವು ದೇವಸ್ಥಾನಗಳಲ್ಲೂ ಕೃಷ್ಣನ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಪಾಲಕರು ಮಕ್ಕಳಿಗೆ ಕೃಷ್ಣ-ರಾಧೆಯ ವೇಷಭೂಷಣ ತೊಡಿಸಿ ಶಾಲೆಗೆ ಕರೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net