ಕೃಷ್ಣ-ರಾಧೆ ವೇಷದಲ್ಲಿ ಸಂಭ್ರಮಿಸಿದ ಚಿಣ್ಣರು

Arunodaya School - Copy
Published on

ಬೀದರ್: ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಣ್ಣರು ಕೃಷ್ಣ ಹಾಗೂ ರಾಧೆ ವೇಷ ಧರಿಸಿ ಸಂಭ್ರಮಿಸಿದರು.
ಮಕ್ಕಳು ಮನೆಯಲ್ಲೇ ಕೃಷ್ಣ ಹಾಗೂ ರಾಧೆ ವೇಷ ತೊಟ್ಟು ಶಾಲೆಗೆ ಬಂದಿದ್ದರು. ಕೃಷ್ಣ ವೇಷಧಾರಿಗಳು ತಲೆ ಮೇಲೆ ನವಿಲು ಗರಿಯ ಕಿರೀಟ ತೊಟ್ಟಿದ್ದರು. ಕೈಯಲ್ಲಿ ಕೊಳಲು ಹಿಡಿದುಕೊಂಡಿದ್ದರು.
ಶಾಲೆ ಆವರಣದಲ್ಲಿ ಕಟ್ಟಲಾಗಿದ್ದ ಮೊಸರು ಗಡಿ ಒಡೆದು ಸಂತಸಪಟ್ಟರು. ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಬೋಧಕ ಬೋಧಕೇತರ ಸಿಬ್ಬಂದಿಗೆ ಸತ್ಕರಿಸಿ, ನೆನಪಿನ ಕಾಣಿಕೆ ನೀಡಲಾಯಿತು. ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಬಹಳ ಮಹತ್ವದ ಸ್ಥಾನ ಇದೆ. ಗುರುವಿನ ಮಾರ್ಗದರ್ಶನವಿದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು. ಭಗವಾನ ಕೃಷ್ಣ ಸತ್ಯ, ನ್ಯಾಯ, ನೀತಿ ಹಾಗೂ ಧರ್ಮದ ಪ್ರತೀಕ ಎಂದರು.
ಶಾಲೆ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಶಿಕ್ಷಕಿ ಅಲ್ಕಾವತಿ ಮಾತನಾಡಿದರು. ಜ್ಯೋತಿ ಸಂಗೋಳಗಿ ಕವನ ವಾಚಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ಇದ್ದರು. ದೀಪಾಲಿ, ಮೇಘಾ ನಿರೂಪಿಸಿದರು. ಲಿಂಗರಾಜ ಸ್ವಾಗತಿಸಿದರು. ವೈಷ್ಣವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net