ಕೃಷ್ಣ ಪರಮಾತ್ಮನ ಆದರ್ಶ ಎಲ್ಲರಿಗೂ ಸ್ಫೂರ್ತಿ

PH 03
Published on

ಕಮಲಾಪುರ: ಆಧುನಿಕ ಯುಗದಲ್ಲಿ ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಅವತಾರ ಪುರುಷ ಶ್ರೀ ಕೃಷ್ಣ ಪರಮಾತ್ಮನ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಂಕ್ರೆಪ್ಪ ಹತ್ತಿ ಹೇಳಿದರು.

ಮಹಾಗಾಂವ್ ಕ್ರಾಸ್‌ನ ಸಿದ್ಧಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಭವಿಷ್ಯ ಶ್ರೇಷ್ಠ ಪ್ರಜೆಗಳನ್ನು ನಿರ್ಮಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಶಾಲೆಯ ಕಾರ್ಯದರ್ಶಿ ಕಲ್ಯಾಣರಾವ ಬುಜುರ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆ ಸಾಗುತ್ತಿದೆ. ಗುರುಗಳ ದೂರದೃಷ್ಟಿಯ ಫಲದಿಂದ ಗ್ರಾಮೀಣ ಮಕ್ಕಳಿಗೆ ಸಿಬಿಎಸ್‌ಸಿ ಶಿಕ್ಷಣ ಸಿಗುತ್ತಿದೆ ಎಂದು ತಿಳಿಸಿದರು.

ಬೀದರ್‌ನ ಸಿದ್ದಾರ್ಥ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಜಗದೇವಪ್ಪ ಚಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಚಂದನಸಿAಗ್, ಗುರುರಾಜ ಬೊಮ್ಮನ, ಜಗದೀಶ, ಗಿರಿಜಾ ಪಾಟೀಲ್, ಶ್ರೀದೇವಿ ಕಲ್ಕಿ, ಭಾರತಿ, ಶ್ರುತಿ ಇತರರಿದ್ದರು. ಶಶಾಂಕ, ಪ್ರಜ್ವಲ್ ನಿರೂಪಣೆ ಮಾಡಿದರು. ಶಿವಲೀಲಾ ಗುತ್ತೇದಾರ್ ಸ್ವಾಗತಿಸಿದರು. ರಾಜೇಂದ್ರ ಕಣ್ಣಿ ವಂದಿಸಿದರು. ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಮಕ್ಕಳು ಕೃಷ್ಣ-ರಾಧೆ ವೇಷಧರಿಸಿ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net