ಕೃಷ್ಣ ನಗರದ ಬಡಾವಣೆಯ ಮನೆಯಲ್ಲಿ ಲಕ್ಷಾಂತರ ರೂ ಚಿನ್ನಾಭರಣ ಕಳವು

udp-theft
Published on

ಹಾಸನ: ನಗರದ ಅರಸೀಕೆರೆ ರಸ್ತೆಯ ಕೃಷ್ಣ ನಗರದ ಮನೆಯೊಂದರ ಬೀಗ ಮುರಿದು 3,67,500 ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನದ ಆಭರಣ ಕಳವು ಮಾಡಿರುವ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಎಂಬುವರು ಕುಟುಂಬ ಸದಸ್ಯರೊಂದಿಗೆ ಮಾ.20ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಮಗಳು ಪಲ್ಲವಿ ಅವರ ಮನೆಗೆ ಹೋಗಿದ್ದರು. ಮಾ.25 ರಂದು ಸಂಜೆ 4 ಗಂಟೆಗೆ ಮನೆಗೆ ಬಂದು ನೋಡಲಾಗಿ ಕಳ್ಳರು ಮೊದಲ ಮಹಡಿಯ ಮನೆಯ ಬಾಲ್ಕನಿ ಬಾಗಿಲ ಮನೆಯ ಬೀಗ ಮುರಿದು ಒಳಪ್ರವೇಶಿಸಿ, ರೂಮಿನಲ್ಲಿಟ್ಟಿದ್ದ ಕಬ್ಬಿಣದ ಬೀರುವಿನ ಬಾಗಿಲು ಮುರಿದು ಆಭರಣ ದೋಚಿದ್ದಾರೆ.
ಬೀರುವಿನಲ್ಲಿಟ್ಟಿದ್ದ 3,67,500 ರೂ. ಬೆಲೆಯ 51 ಗ್ರಾಂ ತೂಕದ ಚಿನ್ನದ 3 ಬಳೆಗಳು, 10 ಗ್ರಾಂ ತೂಕದ ಚಿನ್ನದ ನವರತ್ನದ ಉಂಗುರ, 16 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ 2 ಜೊತೆ ಕಿವಿಯ ರಿಂಗುಗಳು, 800 ಗ್ರಾಂ ತೂಕದ 2 ಬೆಳ್ಳಿಯ ತಟ್ಟೆಗಳು, 300 ಗ್ರಾಂ ತೂಕದ 2 ಬೆಳ್ಳಿಯ ತಟ್ಟೆಗಳು, 200 ಗ್ರಾಂ ತೂಕದ 2 ಬೆಳ್ಳಿಯ ಪ್ರಸಾದದ ಬಟ್ಟಲು, 120 ಗ್ರಾಂ ತೂಕದ 4 ಬೆಳ್ಳಿಯ ಕುಂಕುಮದ ಭರಣಿಗಳು, 100 ಗ್ರಾಂ ತೂಕದ ಬೆಳ್ಳಿಯ ಗಂಧದ ಬಟ್ಟಲು, 100 ಗ್ರಾಂ ತೂಕದ ಬೆಳ್ಳಿಯ 2 ದೀಪದ ಭರಣಿಗಳು, 10 ಗ್ರಾಂ ತೂಕದ ಬೆಳ್ಳಿಯ ನಾಣ್ಯಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net