ಕೃಷ್ಣ ಜಯಂತಿಗೆ ಸಿದ್ಧತೆ ಮಾಡಿಕೊಳ್ಳಿ

MAHESH MALAGITTI
Published on

ಕೊಪ್ಪಳ: ಶ್ರೀ ಕೃಷ್ಣ ಜಯಂತಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅಧಿಕಾರಿಗಳಿಗೆ ಸೂಚಿಸಿದರು.


ನಗರದ ತಮ್ಮ ಸ್ವಕಚೇರಿ ಸಭಾಂಗಣದಲ್ಲಿ ಜಯಂತಿ ಆಚರಣೆ ಸಂಬಂಧ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.


ಕೊಪ್ಪಳದ ಸಿರಸಪ್ಪಯ್ಯನ ಮಠ ಓಣಿಯ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಸೆ.11ರಂದು ಜಯಂತಿ ಕಾರ್ಯಕ್ರಮ ಇರಲಿದೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮವಿದ್ದು, ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಶಿಷ್ಠಾಚಾರ ಪಾಲಿಸಿ. ಸಮುದಾಯದ ಎಲ್ಲ ಮುಖಂಡರು, ಸಾರ್ವಜನಿಕರು ಭಾಗವಿಸುವಂತೆ ನೋಡಿಕೊಳ್ಳಿ. ಜಯಂತಿಯಂದು ಪಾಲ್ಗೊಳ್ಳುವ ಸಾರ್ವಜನಿರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ನಿರ್ದೇಶಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಕೃಷಿ ಇಲಾಖೆ ಸಿಬ್ಬಂದಿ ಶಶಿಕಲಾ ಸವಣೂರು, ಸಮುದಾಯ ಮುಖಂಡರಾದ ರಮೇಶ ಯಾದವ, ಜೆ.ಪಿ.ನಾರಾಯಣ ಗೌಡ ಯಾದವ, ಬಿ.ವೆಂಕಣ್ಣ ಬಾಳಪ್ಪ, ಎಚ್. ಜಗನ್ನಾಥ ಯಾದವ, ವೆಂಕಟೇಶ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net