

ಚಿತ್ರದುರ್ಗ: ಬೆಂಗಳೂರನ್ನು ಐಟಿ-ಬಿಟಿ ಹೆಬ್ಬಾಗಿಲನ್ನಾಗಿ ಮಾಡಿದ, ಅನೇಕ ಜನಪರ ಕಾರ್ಯಕ್ರಮಗಳನ್ನು ನಾಡಿಗೆ ಕೊಟ್ಟಂಥ ಕೀರ್ತಿ ಮಹಾನ್ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮ ಂಗಳವಾರ, ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಸಮರ್ಥ ವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಕೃಷ್ಣ ಪ್ರಮುಖರಾಗಿದ್ದಾರೆ ಎಂದರು.
ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದ್ದರೆ, ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಿಸಿದರು. ವರನಟ ಡಾ.ರಾಜಕುಮಾರ್ ಅಪಹರಣ ಸವಾಲನ್ನು ಸಮರ್ಥವಾಗಿ ಎದುರಿಸಿದ್ದರು ಎಂದರು.
ಮೋಹನ್, ನಾಗರಾಜ್‌ಬೇದ್ರೆ, ಭಾರ್ಗವಿ ದ್ರಾವಿಡ್, ಡಿ.ಒ. ಮುರಾರ್ಜಿ, ಯೋಗೀಶ್ ಸಹ್ಯಾದ್ರಿ, ಎಸ್.ಸಿ. ಶಂಭು, ಪರಶುರಾಮ್, ನವೀನ್, ಮಹಾಂತೇಶ್ ಮತ್ತಿತರ ಪಕ್ಷದ ಪ್ರಮುಖರು ಇದ್ದರು.