ಕೃಷಿಹೊಂಡಕ್ಕೆ ಬಿದ್ದು ಬಾಲಕ ಮೃತ

Published on

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಯಲದಬಾಗಿಯ ತೋಟದಲ್ಲಿನ ಕೃಷಿ ಹೊಂಡಕ್ಕೆ ಶುಕ್ರವಾರ ಸಂಜೆ ಬಾಲಕ ಬಿದ್ದು ಮೃತಪಟ್ಟಿದ್ದಾನೆ. ತಾಲೂಕಿನ ಯಲದಬಾಗಿ ಗ್ರಾಮದ ನಿವಾಸಿ ಸುರೇಶ್​ ಅವರ ಪುತ್ರ ಕುಶ(6) ಮೃತ. ಸುರೇಶ್​ ತೋಟದಲ್ಲಿ ಗೊಬ್ಬರ ಹಾಕಿಸುವ ಕೆಲಸದಲ್ಲಿ ತೊಡಗಿದ್ದ ವೇಳೆ ಪಕ್ಕದ ತೋಟದಲ್ಲಿನ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದ ಕುಶ ಕಾಲು ಜಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಕೆಲಸ ಮುಗಿಸಿ ಸುರೇಶ್​ ಮತ್ತು ಕುಟುಂಬದವರು ಬಾಲಕನಿಗಾಗಿ ತೋಟದಲ್ಲಿ ಹುಡುಕಾಟ ನಡೆಸಿದ್ದಾರೆ. ಕೃಷಿ ಹೊಂಡದ ನೀರಿನಲ್ಲಿ ಬಾಲಕನ ಚಪ್ಪಲಿ ತೇಲುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಮೋಟರ್​ ಮೂಲಕ ನೀರನ್ನು ಹೊರ ಹಾಕಿದಾಗ ಮಗು ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ದಂಡಿನಶಿವರ ಪಿಎಸ್​ಐ ಚಿತ್ತರಂಜನ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್​ ನಿಯಂತ್ರಣ ತಪ್ಪಿ ಸವಾರ ಸಾವು

ಹುಲಿಯೂರುದುರ್ಗ: ಉಜ್ಜನಿ ಗ್ರಾಮದಿಂದ ಚನ್ನಪಟ್ಟಣಕ್ಕೆ ತೆರಳುವ ರಸ್ತೆಯ ದೇವಸಂದ್ರ ಬಳಿಯ ತಿರುವಿನಲ್ಲಿ ಶುಕ್ರವಾರ ತಡರಾತ್ರಿ ಬೈಕ್​ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದಿದ್ದು, ಸವಾರ ಸ್ಥಳದಲೇ ಮೃತಪಟ್ಟಿದ್ದಾನೆ. ಕುಣಿಗಲ್​ ತಾಲೂಕಿನ ಎಲೆಕಡಕಲು ಗ್ರಾಮದ ವಾಸು(30) ಮೃತ. ಜಿಆರ್​ಬಿ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ವಾಸು ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಉಜ್ಜನಿ ಗ್ರಾಮಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ವಾಸು ತಡರಾತ್ರಿಯಾದರು ಬಂದಿರಲಿಲ್ಲ. ಶನಿವಾರ ಬೆಳಗ್ಗೆ ದೇವಸಂದ್ರ ಬಳಿ ಒಂದು ಕಡೆ ಬೈಕ್​, ಮೃತ ದೇಹ ಪತ್ತೆಯಾಗಿದೆ. ಹುಲಿಯೂರುದುರ್ಗ ಪೊಲೀಸರು

ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net