

ಹಾಸನ : ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದರು ಕೃಷಿಗೆ ಸಂಬಂಧಿಸಿದ ಆವಿಷ್ಕಾರವನ್ನು ರೈತರಿಗೆ ತಲುಪಿಸುವುದೇ ಒಂದು ಸವಾಲಿನ ಕೆಲಸವಾಗಿದೆ ಎಂದು ನೂತನ ಲಯನ್ಸ್ ಹಾಸನ್ ಹೊಯ್ಸಳ ಕ್ಲಬ್‌ನ ನೂತನ ಅಧ್ಯಕ್ಷ ಎ.ಎಸ್. ಶಶಿಕಿರಣ್ ಹೇಳಿದರು.
ನಗರದ ಕುವೆಂಪು ಬಡವಾಣೆಯಲ್ಲಿರುವಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ನಡೆದ ನೂತನ ಲಯನ್ಸ್ ಮತ್ತು ಲಿಯೋ ಹಾಸನ್ ಹೊಯ್ಸಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿಸದ ಅವರು ರೈತರಿಗೆ ಮಾಹಿತಿ ಕೊಡುವುದರ ಜೊತೆಗೆ ತರಬೇತಿ ಕೊಡುವುದು ಮುಖ್ಯವಾದ ಕೆಲಸವಾಗಿದೆ ಎಂದರು.
ವಿದ್ಯಾರ್ಥಿಗಳು ಓದುವುದರ ಬಗ್ಗೆ ತಲೆಕೆಡೆಸಿಕೊಂಡು ಒತ್ತಡದಲ್ಲಿ ಇರುತ್ತಾರೆ. ಅವರಿಗೆ ಜೀವನದ ಪಾಠವನ್ನು ಹೇಳಿಕೊಡುವುದರ ಜೊತೆಗೆ ಜೀವನದ ತಿಳಿಸಬೇಕು ಈ ನಿಟ್ಟಿನಲ್ಲಿ ನಮ್ಮ ಕ್ಲಬ್‌ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಲಯನ್ಸ್ ಮತ್ತು ಲಿಯೋ ಹಾಸನ್ ಹೊಯ್ಸಳದ ಕ್ಲಬ್‌ನ ನೂತನ ಪದಾಧಿಕಾರಿಗಳು ರೈತರಿಗೆ ಅನುಕೂಲಕರ ರೀತಿಯಲ್ಲಿ ಸೇವೆ ಮಾಡುವ ಎರಡು ಕ್ಲಬ್‌ನ ಪದಾಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಲಯನ್ಸ್ ಕ್ಲಬ್ ಎಂದರೆ ಲೀಡರ್ ಶಿಪ್ ಕ್ವಾಲಿಟಿ ಕಲಿಸಿ ಕೊಡುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ನೂತನ ಲಯನ್ಸ್ ಮತ್ತು ಲಿಯೋ ಹಾಸನ್ ಹೊಯ್ಸಳದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕರಿಸಿದರು. ಇದೆ ವೇಳೆ ಲಯನ್ಸ್ ಹಿರಿಯರಾದ ಅಶೋಕ್ ಕುಮಾರ್, ಲಯನ್ಸ್ ಹಾಸನ್ ಹೊಯ್ಸಳದ ಹಿಂದಿನ ಅಧ್ಯಕ್ಷ ಎಸ್. ರಾಘವೇಂದ್ರ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಎಂ.ಹೆಚ್. ಶಂಕರ್, ಖಜಾಂಚಿ ಪ್ರಶಾಂತ್, ಲಿಯೋ ಹಾಸನ್ ಹೊಯ್ಸಳ ನೂತನ ಅಧ್ಯಕ್ಷ ಹರ್ಷ ಸಿ. ಗೌಡ, ಕಾರ್ಯದರ್ಶಿ ಸುಶ್ಮಿತಾ, ಖಜಾಂಚಿ ಪಿ. ಹರ್ಷ ಇತರರು ಇದ್ದರು.