ಕೃಷಿಗೆ ಆದ್ಯತೆಯಿಂದ ದೇಶದ ಸಮಗ್ರ ಅಭಿವೃದ್ಧಿ: ಎನ್. ಚಲುವರಾಯಸ್ವಾಮಿ

ಕೃಷಿಗೆ ಆದ್ಯತೆಯಿಂದ ದೇಶದ ಸಮಗ್ರ ಅಭಿವೃದ್ಧಿ: ಎನ್. ಚಲುವರಾಯಸ್ವಾಮಿ
Published on

ಹಾಸನ: ಕೃಷಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ಮಾತ್ರ ದೇಶ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕತ ಸುಸ್ಥಿರತೆ ಸಾಧ್ಯವಾಗ ಬಲ್ಲದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕಿನ ಕಾರೆಕೆರೆ ಕೃಷಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಗೆ ನೀಡಿರುವ ಆದ್ಯತೆ ಕಡಿಮೆಯಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಪ್ರಾಮುಖ್ಯತೆ ನೀಡಬೇಕು.ಕೃಷಿ ಶಿಕ್ಷಣವನ್ನು ಸರ್ಕಾರ ಹೆಚ್ಚಾಗಿ ಖಾಸಗೀಕರಣ ಮಾಡಿಲ್ಲ. ಎಲ್ಲರೂ ನುರಿತ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸಿ ನಿಗದಿತ ಗುರಿ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಿ ಎಂದು ಕಿವಿ ಮಾತು ಹೇಳಿದರು.
ಕೇವಲ ಉದ್ಯೋಗಕ್ಕಾಗಿ ಕೃಷಿ ಕಾಲೇಜಿನಲ್ಲಿ ಕಲಿಯದೆ, ಇತರರಿಗೆ ಕೆಲಸ ನೀಡುವಂತೆ ಬೆಳೆಯಬೇಕು, ನೀವು ಪಡೆಯುವ ಶಿಕ್ಷಣ, ಮಾಡುವ ಸಂಶೋಧನೆ ಕೃಷಿಕರಿಗೆ ಸುಲಭವಾಗಿ ಸಿಗುವಂತಾಗಲಿ ಎಂದರು
ಕಾರೆಕೆರೆ ಕಾಲೇಜಿಗೆ ಹಾಸ್ಟೆಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡಿನ್.ಮುನಿಸ್ವಾಮಿ ಗೌಡ, ಬೆಂಗಳೂರು ಕೃಷಿ ವಿ.ವಿ ವಿಶ್ರಾಂತ ಕುಲಸಚಿವ ಡಾ.ಎ.ಬಿ. ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net