

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ನಿವಾಸಿ ನಾಗರತ್ನ ಎಂಬುವರ ಹೊಲದಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ತನ್ನಿಬ್ಬರ ಮಕ್ಕಳೊಂದಿಗೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲಿಗನೂರು ಗ್ರಾಮದ ನಾಗರತ್ನ (40), ಪುತ್ರಿಯರಾದ ಶೃತಿ (12), ಗಿರೀಜಾ (7) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸ ಲಾಗಿದೆ.
ರೈತ ಮಹಿಳೆಯ ಆತ್ಮಹತ್ಯೆಗೆ ನಿರ್ದಿಷ್ಠ ಕಾರಣ ತಿಳಿದುಬಂದಿಲ್ಲ. ಆಂಧ್ರ ಬ್ಯಾಂಕಿ
ನಲ್ಲಿ ಅಂದಾಜು 5.60 ಲಕ್ಷ ರೂ ಹಾಗೂ ಖಾಸಗಿ ಲೇವಾದೇವಿಗಾರರಿಂದ 15 ಲಕ್ಷ ರೂ.ಗಳ ಸಾಲಸೋಲ ಮಾಡಿದ್ದರೆಂದು ಮೂಲಗಳು ತಿಳಿಸಿವೆ.
ವಿಷಯ ತಿಳಿದ ತತ್ ಕ್ಷಣವೇ ಘಟನಾ ಸ್ಥಳಕ್ಕೆ ಸಿರುಗುಪ್ಪ ಪೋಲಿಸ್ ಠಾಣೆಯ ಸಿಪಿಐ ಟಿ ಆರ್ ಪವಾರ್, ಪಿಎಸ್ಐ ಕೆ.ರಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ರವಾನಿಸ ಲಾಗಿದೆ.