

ಕಮಲಾಪುರ: ಕಳೆದ ಎರಡು ತಿಂಗಳುಗಳಿAದ ಕೆಂಬಾಳೆ ನಾಡಿನ ರೈತರ ನಿದ್ದೆ ಕೆಡಿಸಿದ್ದ ಕೃಷಿ ಸಾಮಗ್ರಿಗಳ ಕಳ್ಳರನ್ನು ಬಂಧಿಸುವಲ್ಲಿ ಮಹಾಗಾಂವ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಗೋಕುಲ ನಗರದ ಮಲ್ಲಿಕಾರ್ಜುನ ಸ್ವಾಮಿ, ಕೆಸರಟಗಿಯ ಪ್ರಶಾಂತ ಯಲ್ಲಪ್ಪ ಬಂಧಿತರು. ಇವರಿಂದ ಕರೆಂಟ್ ಸರ್ವೀಸ್ ವೈರ್, ಕೇಬಲ್ ವೈರ್, 2 ಟಿ, ಎಡಿ ಸೈಕಲ್‌ಗಳು, ಸ್ಟಾರ್ಟರ್ ಡಬ್ಬಾಗಳು, ಸ್ಪಿಂಕಲರ್ ಚಡಿ ಸಾಮಾನುಗಳು, 212 ಫೀಟ್‌ನ ರೇನ್ ಪೈಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ರೈತರ ಜಮೀನುಗಳಲ್ಲಿನ ಸಾಮಗ್ರಿಗಳು ನಿರಂತರ ಕಳ್ಳತನವಾಗುತ್ತಿದ್ದವು. ಇದರಿಂದ ಬೇಸತ್ತ ರೈತರು ಮಹಾಗಾಂವ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ವಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಆಶಾ, ಎಎಸ್‌ಐ ಗುಲಾಬ್, ಸಿಬ್ಬಂದಿ ಅಮರನಾಥ, ರಾಮಲಿಂಗ, ಶ್ರವಣಕುಮಾರ, ಸಿದ್ದರಾಮ, ಸೋಮನಾಥ, ಸಿದ್ದಲಿಂಗ ಅವರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ರೈತರ ಸಮಸ್ಯೆಗೆ ಸ್ಪಂದಿಸಿದ ವಿಜಯವಾಣಿ
ಅನ್ನದಾತರ ಜಮೀನಿನಲ್ಲಿನ ವಸ್ತುಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದವು. ಈ ಬಗ್ಗೆ ವಿಜಯವಾಣಿ ದಿನಪತ್ರಿಕೆ ಆ.15ರಂದು `ಕೆಂಬಾಳೆ ನಾಡಿನ ರೈತರ ನಿದ್ದೆಗೆಡಿಸಿದ ಕಳ್ಳರು' ಎಂಬ ತಲೆ ಬರಹದಡಿ ವಿಸ್ತÈತ ವರದಿ ಪ್ರಕಟಿಸಿತ್ತು. ಇದರಿಂದ ತನಿಖೆ ತೀವ್ರಗೊಳಿಸಿದ ಪೊಲೀಸರು ವರದಿ ಪ್ರಕಟಗೊಂಡ 13 ದಿನಗಳಲ್ಲಿಯೇ ಕಳ್ಳರನ್ನು ಅರೆಸ್ಟ್ ಮಾಡಿದೆ. ವಿಜಯವಾಣಿ ಪತ್ರಿಕೆ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಮಲಾಪುರ ತಾಲೂಕಿನ ರೈತರ ಜಮೀನಿಗಳಲ್ಲಿನ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರನ್ನು ಬಂಧಿಸಿ, ಕೆಲ ಸಾಮಗ್ರಿಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಒಟ್ಟು ಮೂರು ತಂಡಗಳು ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇದೀಗ ಒಂದು ಟೀಮ್ ಅರೆಸ್ಟ್ ಆಗಿದ್ದು, ಶೀಘ್ರ ಇನ್ನೆರಡು ತಂಡಗಳ ಪತ್ತೆ ಕಾರ್ಯ ನಡೆಯಲಿದೆ. ಪೊಲೀಸ್ ಇಲಾಖೆ ರೈತರ ಪರವಾಗಿದ್ದು, ಯಾರು ಭಯಪಡಬೇಕಿಲ್ಲ.
| ವಿ.ನಾರಾಯಣ ಸಿಪಿಐ