ಕೃಷಿ ಸಚಿವ ಬಿ.ಸಿ. ಪಾಟೀಲರಿಂದ ಆತ್ಮಲಿಂಗಕ್ಕೆ ಪೂಜೆ

16gkn1-a2-
Published on

ಗೋಕರ್ಣ: ಕೃಷಿ ಸಚಿವ ಬಿ.ಸಿ. ಪಾಟೀಲ ಬುಧವಾರ ಕುಟುಂಬಸಹಿತ ಪುರಾಣ ಖ್ಯಾತ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಗಂಗಾಭಿಷೇಕ ಸಹಿತ ನವಧಾನ್ಯಾಭಿಷೇಕ ಕೈಗೊಂಡರು. ಬಳಿಕ ನಂದಿ ಮಂಟಪದಲ್ಲಿ ಸುವರ್ಣ ನಾಗಾಭರಣಕ್ಕೆ ಪೂಜಾರತಿ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಮಂದಿರಲ್ಲಿನ ಅಚ್ಚುಕಟ್ಟು ವ್ಯವಸ್ಥೆ, ಶಿಸ್ತು ಮತ್ತು ಸ್ವಚ್ಛತೆಯನ್ನು ಶ್ಲಾಘಿಸಿ, ಅಷ್ಟಬಂಧದ ಮೂಲಕ ಆತ್ಮಲಿಂಗದ ವಿಶ್ವರೂಪವನ್ನು ವೀಕ್ಷಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಸಚಿವರನ್ನು ಗೌರವಿಸಿದರು. ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ತಾಪಂ ಸದಸ್ಯ ಮಹೇಶ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಗ್ರಾಪಂ ಮಾಜಿ ಸದಸ್ಯರಾದ ಪ್ರಭಾಕರ ಪ್ರಸಾದ, ಶಂಕರ ಗೋಪಿ ಇತರರಿದ್ದರು.

ಹೆಬ್ಬಾರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೂಡ ಬುಧವಾರ ಖಾಸಗಿ ಕಾರ್ಯಕ್ರಮ ನಿಮಿತ್ತ ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net