

ಔರಾದ್: ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕಾಗಿದ್ದು, ದೇಶದ ವಿಜ್ಞಾನಿಗಳು ಕೃಷಿ ಕುರಿತ ಅಧ್ಯಯನ ನಡೆಸುತ್ತಿದ್ದಾರೆ. ಇದರಿಂದ ಹೆಚ್ಚಿನ ಇಳುವರಿ ಪಡೆದು ಉತ್ತಮ ಆದಾಯ ಪಡೆಯಬಹುದು ಎಂದು ಹೈದರಾಬಾದ್ ನಾರ್ಮ ಸಂಸ್ಥೆ ವಿಸ್ತೀರ್ಣ ವಿಭಾಗದ ಮುಖ್ಯಸ್ಥ ಡಾ.ವೆಂಕಟಕುಮಾರ ಹೇಳಿದರು.
ನಾಗೂರ (ಎನ್) ಗ್ರಾಮದಲ್ಲಿ ತೆಲಂಗಾಣದ ನಾರ್ಮ್ ಸಂಸ್ಥೆ, ರಿಲಾಯನ್ಸ್ ಫೌಂಡೇಷನ್, ಕೃಷಿ ವಿe್ಞÁನ ಕೇಂದ್ರದ ಸಹಯೋಗದಲ್ಲಿ ಒಂದು ವಾರ ನಡೆದ ಕ್ಷೇತ್ರ ಅನುಭವ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ದೇಶದ ವಿವಿಧೆಡೆಯಿಂದ ಆಗಮಿಸಿದ ತರಬೇತಿ ಹಂತದ ವಿe್ಞÁನಿಗಳಿಗೆ ಕ್ಷೇತ್ರ ಅಧ್ಯಯನಕ್ಕೆ ನಾರ್ಮ್ ಸಂಸ್ಥೆಯಿAದ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ವಾರದಿಂದ ತರಬೇತಿ ಹಂತದ ವಿಜ್ಞಾನಿಗಳು ಗ್ರಾಮದಲ್ಲಿ ಸಾಮಾಜಿಕ ನಕಾಶೆ, ಬೆಳೆಗಳು, ಮಣ್ಣಿನ ವಿಶೇಷ, ಅಂತರ್ಜಲ ಮಟ್ಟ ಸೇರಿ ಹಲವು ವಿಷಯ ಜಮೀನಿಗೆ ತೆರಳಿ ಅಧ್ಯಯನ ಮಾಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಇದರಿಂದ ವಿಜ್ಞಾನಿಗಳಿಗೆ ಹೆಚ್ಚಿನ ಜ್ಞಾನ ದೊರಕಿದೆ ಎಂದರು.
ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ ಮಾತನಾಡಿ, ಕೃಷಿಯಲ್ಲಿ ಸುಂದರ ಬದುಕು ನಡೆಸಬೇಕಾದರೆ ರೈತರಿಗೆ ಪೂರಕವಾಗಿ ಕೃಷಿ ವಿಜ್ಞಾನಿಗಳು ಕಾರ್ಯ ನಿರ್ವಹಿಸಬೇಕು ಎಂದರು.
ಜನವಾಡ ಕೃಷಿ ವಿe್ಞÁನ ಕೇಂದ್ರ ವಿe್ಞÁನಿ ಡಾ.ಮಲ್ಲಿಕಾರ್ಜುನ ಲಿಂಗದಳ್ಳಿ ಜೈವಿಕ ಇಂಧನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜೈವಿಕ ಇಂಧನದ ಮಹತ್ವದ ಬಗ್ಗೆ ತಿಳಿಸಿದರು.
ತರಬೇತಿ ವಿಜ್ಞಾನಿಗಳಾದ ಬೆಂಗಳೂರಿನ ಪವಿತ್ರಾ ವಿ., ಚಿತ್ರದುರ್ಗದ ಮೈತ್ರಾ ಆರ್, ಓರಿಸ್ಸಾದ ಸೌರವ ಮಿಶ್ರ, ಪಶ್ಚಿಮ ಬಂಗಾಳದ ಸಮೀರ ಬರ್ಮನ್, ತಮಿಳುನಾಡಿನ ಅಳಗು ರಾಜಾ, ಮೇಘಾಲಯದ ಡಾವು ರೂಹಿ ಪೀಡೆ ಅವರ ತಂಡ ಒಂದು ವಾರ ಕೃಷಿ ಬಗ್ಗೆ ಅಧ್ಯಯನ ನಡೆಸಿತು.
ಪ್ರಮುಖರಾದ ಸಂಗಮೇಶ ಕೊಡಗೆ, ಕನ್ಯಾಕುಮಾರಿ, ಬಸಪ್ಪ ಪಾಟೀಲ್, ಬಸಪ್ಪ ಬಾಗಾಳೆ, ಶಿವಕಾಂತ ಕೊಡಗೆ, ಬಾಬುರಾವ, ಶಾಂತಮ್ಮ ಸ್ವಾಮಿ, ಚನ್ನಮ್ಮ ಮೂಲಗೆ, ಮಲ್ಲಿಕಾರ್ಜುನ ಮಾಳಗೆ ಇತರಿದ್ದರು.