

ವಡಗೇರಾ : ಸರ್ಕಾರ ಜಾರಿಗೆ ತಂದಿರುವ ಕೃಷಿ ಯೋಜನೆಗಳ ಲಾಭವನ್ನು ಪ್ರತಿ ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಪಟ್ಟಣದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ನೀತಿ ಆಯೋಗದ ಮಹತ್ವಾಕಾಂಕ್ಷಿ ಯೋಜನೆಯ ಸಂಕಲ್ಪ ಸಪ್ತಾಹದ ಕೃಷಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಕಲ್ಪ ಸಪ್ತಾಹ ಯೋಜನೆಯಡಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ತಾಲೂಕನ್ನು ಗುರುತಿಸಿ ಆರೋಗ್ಯ, ಶಿಕ್ಷಣ ಹಾಗೂ ಕೃಷಿಗೆ ಸಂಬAಧಿಸಿದAತೆ ವಿವಿಧ ಆಯಾಮಗಳಲ್ಲಿ ತಾಲೂಕನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.
ರೈತರ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗಳ ಮಾಹಿತಿ ಜನತೆಗೆ ಸಮರ್ಪಕವಾಗಿ ತಿಳಿ ಹೇಳುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.
ಜAಟಿ ಕೃಷಿ ನಿರ್ದೇಶಕ ಮುತ್ತುರಾಜ್ ಮಾತನಾಡಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಈಗಾಗಲೇ ಸರ್ಕಾರ ಬರ ಘೋಷಣೆ ಮಾಡಿದೆ. ಅದರಲ್ಲಿ ಶಹಾಪುರ ಮತ್ತು ವಡಗೇರಾ ತಾಲೂಕು ಅತಿಹೆಚ್ಚು ಬರಪೀಡಿತ ತಾಲೂಕಿಗೆ ಒಳಪಟ್ಟಿವೆ. ಬರ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಹೀಗಾಗಿ ನಮ್ಮ ಅಧಿಕಾರಿಗಳು ಸಮೀಕ್ಷೆಗೆ ಬಂದಾಗ ಅವರಿಗೆ ಸಮರ್ಪಕ ಮಾಹಿತಿ ನೀಡುವುದರ ಜತೆಗೆ ಅಕ್ಕ-ಪಕ್ಕದ ರೈತರಿಗೂ ಇದರ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಸುನೀಲ್‌ಕುಮಾರ, ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ, ಕೃಷಿ ಅಧಿಕಾರಿ ಗಣಪತಿ, ಪಶು ವೈದ್ಯಾಧಿಕಾರಿ ಡಾ.ಪ್ರಿಯಾಂಕರಡ್ಡಿ, ನೀತಿ ಆಯೋಗದ ಸಮಾಲೋಚಕಿ ಕಾವೇರಿ, ಡಾ.ಜಯಪ್ರಕಾಶ ನಾರಾಯಣ, ಡಾ.ಕುಮಾರಸ್ವಾಮಿ ಹಿರೇಮಠ, ಡಾ.ಪಾಲಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ, ಸಂಗುಗೌಡ ಮಾಲಿ ಪಾಟೀಲ್, ಶರಣು ಇಟಗಿ, ಶಿವರಾಜ ಬಾಗೂರ, ಮಲ್ಲಣ್ಣ ನೀಲಹಳ್ಳಿ, ಅಬ್ದುಲ್ ಚಿಗಾನೂರ, ಗಾಳೆಪ್ಪ ಪೂಜಾರಿ, ಬಸನಗೌಡ ಜಡಿ, ತಿಮ್ಮಣ್ಣ ಕಡೇಚೂರ, ಮಲ್ಲಪ್ಪ ಮಾಗನೂರ ಇತರರಿದ್ದರು.
ಬಸವರಡ್ಡಿ ಹಬಸಿಹಾಳ ನಿರೂಪಿಸಿ, ವಂದಿಸಿದರು.