ಕೃಷಿ ಯಂತ್ರಕ್ಕೆ ಸಹಾಯಧನ

nrp ladies
ಎನ್.ಆರ್.ಪುರದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿಂದ ಏರ್ಪಡಿಸಿರುವ ಕೃಷಿ ಮೇಳ ಹಾಗೂ ಮಲೆನಾಡ ಸಂತೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷೆ ಶ್ಯಾಮಲಾ ಉದ್ಘಾಟಿಸಿದರು. ಲೇಖಾ ವಸಂತ್, ವನಮಾಲಮ್ಮ, ಶ್ವೇತಾ ಇತರರಿದ್ದರು.
Published on

ಎನ್.ಆರ್.ಪುರ: ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಏರ್ಪಡಿಸಿರುವ ಕೃಷಿಮೇಳ ಹಾಗೂ ಮಲೆನಾಡ ಸಂತೆಯಲ್ಲಿರುವ ವಿವಿಧ ಕೃಷಿ ಉಪಕರಣವನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್ ಹೇಳಿದರು.

ಶನಿವಾರ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಏರ್ಪಡಿಸಿರುವ ಕೃಷಿಮೇಳ ಹಾಗೂ ಮಲೆನಾಡ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಕೃಷಿಮೇಳ ಹಾಗೂ ಮಲೆನಾಡ ಸಂತೆ ಏರ್ಪಡಿಸಿದ್ದೇವೆ. ಕೂಲಿ ಕಾರ್ಮಿಕರ ಸಮಸ್ಯೆ ಇರುವುದರಿಂದ ರೈತರು ಯಂತ್ರ ಅವಲಂಬಿಸಬೇಕಾಗಿದೆ. ಒಬ್ಬ ರೈತರೇ ಯಂತ್ರದಿಂದ ಅನೇಕ ಕೃಷಿ ಚಟುವಟಿಕೆ ಮಾಡಬಹುದು. ಇದನ್ನು ಗಮನಿಸಿ ಆಧುನಿಕ ಕೃಷಿ ಯಂತ್ರಗಳನ್ನು ಮಲೆನಾಡ ಸಂತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದೇವೆ. ಕೃಷಿ ಯಂತ್ರ ಖರೀದಿಸಿದರೆ ಸಹಾಯಧನ ನೀಡುವ ವ್ಯವಸ್ಥೆ ಸಹ ಮಾಡಿದ್ದೇವೆ ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಲೇಖಾ ವಸಂತ್ ಮಾತನಾಡಿ, ಕೃಷಿ ಹೊಸ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಕೃಷಿಮೇಳ ಹಾಗೂ ಮಲೆನಾಡ ಸಂತೆಯಲ್ಲಿ 54 ಸ್ಟಾಲ್ ತೆರೆಯಲಾಗಿದೆ. ತಾಪಂ ಎನ್‌ಆರ್‌ಎಲ್‌ಎಂನ 10 ಸ್ಟಾಲ್ ಹಾಗೂ ಶಾಶ್ವತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸ್ಟಾಲ್ ಸಹ ಇದೆ. ಒಂದೇ ವರ್ಷದಲ್ಲಿ ಹಾಗೂ 3 ವರ್ಷದಲ್ಲಿ ಫಲ ಬಿಡುವ ತೆಂಗಿನ ಗಿಡ, ಹಲಸಿನ ಗಿಡ, ಮಾವಿನ ಗಿಡ ಇತರ ಹಣ್ಣಿನ ಗಿಡಗಳು ಇವೆ. ಸೀರೆ, ಬ್ಯಾಗು, ಚಪ್ಪಲಿ, ಆಭರಣದ ಅಂಗಡಿ, ಗೃಹೋಪಯೋಗಿ ವಸ್ತುಗಳು ಸಹ ಸಿಗಲಿವೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಖಜಾಂಚಿ ಭಾರತಿ ಚಂದ್ರೇಗೌಡ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಪೂರ್ವಾಧ್ಯಕ್ಷರಾದ ವನಮಾಲಮ್ಮ, ಶ್ವೇತಾ ರಾಜೇಂದ್ರ, ಸಾಗರಿ ನಾಗೇಶ್, ರಶ್ಮಿ ದಯಾನಂದ್, ಉಮಾ ದಿವಾಕರ, ವಿಶಾಲಾ ಜಗದೀಶ್, ಚೈತ್ರಾ ರಮೇಶ್, ವಾಹಿನಿ ರವಿಶಂಕರ್, ವಸಂತಿ ದಿವಾಕರ್, ಪ್ರಶಾಂತಿ ವೆಂಕಟೇಶ್, ಸೋಫಿಯಾ ಸುರೇಶ್, ಸುಸಜ್ಞಾ ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net