ಕೃಷಿ ಮೇಳದಲ್ಲಿ 28 ರಂದು ರಂಗೋಲಿ ಸ್ಪರ್ಧೆ

Untitled
Published on

ಮೈಸೂರು: ಕೃಷಿ ಮೇಳದಲ್ಲಿ ರಂಗೋಲಿಯ ಚಿತ್ತಾರ ಮೂಡಲಿದೆ.


ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಸಹಯೋಗದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜ.27, 28 ಮತ್ತು 29ರಂದು ರಾಜ್ಯಮಟ್ಟದ ‘ಕೃಷಿ ಮೇಳ’ ಆಯೋಜಿಸಿದ್ದು, ಇದಕ್ಕೆ ಪೂರಕವಾಗಿ ಜ.28ರಂದು ಬೆಳಗ್ಗೆ 7ಕ್ಕೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಪಾಲ್ಗೊಳ್ಳಬಹುದು.


ರಂಗೋಲಿ ಬಿಡಿಸಲು 2 ಗಂಟೆ ಸಮಯ ನಿಗದಿ ಮಾಡಲಾಗಿದೆ. ಸ್ಪರ್ಧೆಗೂ ಅರ್ಧ ಗಂಟೆ ಮುಂಚೆಯೇ ಸ್ಥಳದಲ್ಲಿ ಹಾಜರಿರಬೇಕು. ಪ್ರಕೃತಿ, ರೈತ, ವ್ಯವಸಾಯ, ಸೈನಿಕರು, ದೇಶಾಭಿಮಾನ ವಿಷಯಗಳಿಗೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು.


ಸ್ಪರ್ಧೆಯಲ್ಲಿ ಭಾಗವಹಿಸುವರು ರಂಗೋಲಿ ಪುಡಿ ಸೇರಿದಂತೆ ಬೇಕಾದ ಎಲ್ಲ ವಸ್ತುಗಳನ್ನು ತರಬೇಕು. ಜತೆಗೆ, ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು, ಪುಷ್ಪ ದಳಗಳು, ಪುಡಿ, ಧಾನ್ಯಗಳು, ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು.


ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧಪಡಿಸಬೇಕು. ಕೊರೆಯಚ್ಚನ್ನು ಬಳಸುವಂತಿಲ್ಲ. ವೈಯುಕ್ತಿಕ ಸ್ಪರ್ಧೆಯಾಗಿದ್ದು, ಯಾರ ಸಹಾಯ ಪಡೆಯುವಂತಿಲ್ಲ. ಒಂದೇ ಸುತ್ತಿನಲ್ಲಿ ಸ್ಪರ್ಧೆ ಮುಗಿಯಲಿದೆ. ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತು ಬಳಸುವಂತಿಲ್ಲ. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಮಾಹಿತಿ ಮತ್ತು ನೋಂದಣಿಗಾಗಿ ಮೊ. 99000 23022 ಮತ್ತು 99861 41198 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net