

ಧಾರವಾಡ ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ್ದ 4 ದಿನಗಳ ಕೃಷಿ ಮೇಳದಲ್ಲಿ ಬೀಜ ಘಟಕದಿಂದ 665.50 ಕ್ವಿಂಟಲ್ (54.25 ಲಕ್ಷ ರೂ. ಮೌಲ್ಯ) ಹಿಂಗಾರು ಬೆಳೆಗಳ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗಿದೆ.
ಕರೊನಾದಿಂದಾಗಿ 2 ವರ್ಷ ಆಯೋಜನೆಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿ ರೈತರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕೊನೆಯ ದಿನವಾದ ಮಂಗಳವಾರ 36 ಕ್ವಿಂಟಲ್ ( ಸುಮಾರು 2.40 ಲಕ್ಷ ರೂ.) ಹಿಂಗಾರು ಬೆಳೆಗಳ ಬಿತ್ತನೆ ಬೀಜಗಳು ಮಾರಾಟವಾಗಿವೆ.
ವಿಶ್ವವಿದ್ಯಾಲಯದ ಕಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 375 ರೈತ ಬಾಂಧವರು ಭೇಟಿ ನೀಡಿ ಕೃಷಿ ಸಂಬಂಧಿತ ಸಮಸ್ಯೆಗಳನ್ನು ವಿಜ್ಞಾನಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಂಡರು. ಕೊನೆಯ ದಿನ ಸುಮಾರು 3.75 ಲಕ್ಷ ರೈತರು, ವಿದ್ಯಾರ್ಥಿಗಳು, ರೈತ ಮಹಿಳೆಯರು, ವಿಸ್ತರಣಾ ಕಾರ್ಯಕರ್ತರು ಹಾಗೂ ಕೃಷಿ- ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸೇರಿ 4 ದಿನಗಳಲ್ಲಿ 15.37 ಜನ ಮೇಳದಲ್ಲಿ ಪಾಲ್ಗೊಂಡಿದ್ದರು. ಕೃಷಿ- ತೋಟಗಾರಿಕೆ ಪರಿಕರಗಳು ಹಾಗೂ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದರು.