ಕೃಷಿ ಮೇಳಕ್ಕೆ ಸಜ್ಜುಗೊಂಡ ವಿಶ್ವವಿದ್ಯಾಲಯ

DSC_7415
Published on

ಧಾರವಾಡ: ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಸೆ. ೧೭ರಿಂದ ೨೦ರವರೆಗೆ ಆಯೋಜಿಸಿರುವ ಕೃಷಿ ಮೇಳದ ಸಿದ್ಧತೆ ಕಾರ್ಯ ಪೂರ್ಣಗೊಂಡಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು' ಶೀರ್ಷಿಕೆ ಅಡಿ ಈ ಬಾರಿಯ ಕೃಷಿ ಮೇಳ ಆಯೋಜಿಸಲಾಗಿದೆ. ಕೋವಿಡ್‌ನಿಂದಾಗಿ ಕಳೆದ ೨ ವರ್ಷಗಳಿಂದ ಕೃಷಿ ಮೇಳ ನಡೆದಿರಲಿಲ್ಲ. ಈ ಬಾರಿ ಮೇಳ ಆಯೋಜನೆಗೆ ರೈತರಿಂದ ಒತ್ತಾಯ ಕೇಳಿಬಂದಿತ್ತು. ಒಂದು ತಿಂಗಳಿAದ ತಯಾರಿ ನಡೆಸುತ್ತಿದ್ದ ಕೃಷಿ ವಿವಿ ಆಡಳಿತ ಮಂಡಳಿಯ ಪ್ರಯತ್ನ ಸಫಲವಾಗಿದೆ. ಸೆ. ೧೭ರಂದು ಬೆಳಗ್ಗೆ ೧೦.೩೦ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಲಪುಷ್ಪ, ಗಡ್ಡೆ- ಗೆಣಸು, ಮತ್ಸ್ಯ ಮೇಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ, ಬೆಳಗ್ಗೆ ೧೧.೩೦ಕ್ಕೆ ಬೀಜ ಮೇಳ ಉದ್ಘಾಟನೆ, ಮಧ್ಯಾಹ್ನ ೨ ಗಂಟೆಗೆ ಸೂರ್ಯಕಾಂತಿ ಬೆಳೆ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ ೩ ಗಂಟೆಗೆರೈತರಿಂದ ರೈತರಿಗಾಗಿ' ಕಾರ್ಯಕ್ರಮ ನಡೆಯಲಿದೆ.
೧೮ರಂದು ಬೆಳಗ್ಗೆ ೧೧.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳಕ್ಕೆ ಚಾಲನೆ ನೀಡುವರು. ಕೃಷಿ ಸಚಿವ ಬಿ.ಸಿ. ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ನಂತರ ರೈತರಿಂದ ರೈತರಿಗಾಗಿ ವಿವಿಧ ಗೋಷ್ಠಿಗಳು ಜರುಗಲಿವೆ. ೧೯ರಂದು ವಿಚಾರಗೋಷ್ಠಿಗಳು ನಡೆಯಲಿವೆ.

ಸುಮಾರು ೬೫೦ ಮಳಿಗೆಗಳು:
ಮೇಳದಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಽಕ ಇಳುವರಿ ಮತ್ತು ನೀರಿನ ಉಳಿತಾಯಕ್ಕಾಗಿ ಸುಧಾರಿತ ಇಳುವರಿ ಪದ್ಧತಿಗಳು, ರೈತರ ಆದಾಯ ದ್ವಿಗುಣಗೊಳಿಸಲು ವೈವಿಧ್ಯ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿ ಸೇರಿ ಇತರ ಮಾದರಿಗಳ ಬಗ್ಗೆ ರೈತರಿಗೆ ಮಾಹಿತಿ ದೊರೆಯಲಿದೆ. ಗೃಹವಿe್ಞÁನ, ಗುಡಿ ಕೈಗಾರಿಕೆ, ಔಷಽ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಸಾಕು ಪ್ರಾಣಿಗಳ ಪ್ರದರ್ಶನ ಸೇರಿ ಕೃಷಿಗೆ ಸಂಬAಽಸಿದ ಪ್ರದರ್ಶನಗಳು ಮೇಳದಲ್ಲಿರಲಿವೆ. ಕೃಷಿ ಉಪಕರಣ ಪ್ರದರ್ಶನ ಮತ್ತು ಮಾರಾಟಕ್ಕಾಗಿ ೧೮೦ ಹೈಟೆಕ್ ಮಳಿಗೆಗಳು, ೩೬೪ ಸಾಮಾನ್ಯ, ೨೧ ಯಂತ್ರೋಪಕರಣ, ೨೭ ಆಹಾರ ಮತ್ತು ೫೪ ಜಾನುವಾರುಗಳ ಮಳಿಗೆಗಳು ಸೇರಿ ೬೫೦ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net