ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆ ನೋಂದಣಿಗೆ ಅವಕಾಶ

Samad Patel
Published on

ಕಲಬುರಗಿ: ಪ್ರಸಕ್ತ ವರ್ಷದ ಕೃಷಿ ಪ್ರಶಸ್ತಿ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆಸಕ್ತ ರೈತರು, ರೈತ ಮಹಿಳೆಯರು ಆನ್‌ಲೈನ್ ಮೂಲಕ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಭತ್ತ ಮುಂಗಾರು (ನೀರಾವರಿ) ಮತ್ತು (ಮಳೆಯಾಶ್ರಿತ) ಹಾಗೂ ರಾಗಿ ಮುಂಗಾರು, ಜೋಳ ಹಿಂಗಾರು, ಶೇಂಗಾ ಮುಂಗಾರು, ತೊಗರಿ ಮುಂಗಾರು, ಕಡಲೆ ಹಿಂಗಾರು, ಸೋಯಾ ಅವರೆ ಮುಂಗಾರು, ಮುಸುಕಿನ ಜೋಳ ಮುಂಗಾರು, ನವಣಿ ಮುಂಗಾರು ಹಾಗೂ ಸಜ್ಜೆ ಮುಂಗಾರು ಮಳೆಯಾಶ್ರಿತ ಬೆಳೆಗಳಿಗೆ ಸ್ಪರ್ಧೆ ನಡೆಯಲಿದೆ. ಅರ್ಜಿ ಸಲ್ಲಿಸಲು (ಮುಂಗಾರು) ಆ.೩೧ ಮತ್ತು ಹಿಂಗಾರು ಹಂಗಾಮಿಗೆ ನ.೩೦ ಕೊನೆಯ ದಿನ.
ಕೃಷಿ ಇಲಾಖೆಯ ಕೆ.ಕಿಸಾನ್ ಪೋರ್ಟಲ್‌ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆ ಅಳವಡಿಸಲಾಗಿದೆ. ಸಿಟಿಜನ್ ಅಥವಾ ಆರ್‌ಎಸ್‌ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ/ಸೇವಾ ಕೇಂದ್ರ/ಸ್ವತಃ ಆಸಕ್ತರು ಪ್ರತ್ಯೇಕವಾಗಿ ಕೆ.ಕಿಸಾನ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಪ್ರಸಕ್ತ ಸಾಲಿನಿಂದ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net