

ಗೋಣಿಕೊಪ್ಪ: ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘ 1.21 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ.ಚಿಟ್ಟಿಯಪ್ಪ ಹೇಳಿದರು.
ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜನೆಗೊಂಡಿದ್ದ 69ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 65.27 ಕೋಟಿ ರೂ. ಠೇವಣಿ ಸಂಗ್ರಹದೊಂದಿಗೆ ಸದಸ್ಯರಿಗೆ 49.46 ಕೋಟಿ ರೂ. ಸಾಲ ವಿತರಿಸಲಾಗಿದೆ. ಶೇ. 97ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದರು.
ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಸಂಘದಿಂದಲೇ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ. ವರೆಗಿನ ಸಾಲ ನೀಡಿ, 5ರಿಂದ 7 ವರ್ಷದೊಳಗೆ ಮರು ಪಾವತಿಸುವ ಸೌಲಭ್ಯ ಒದಗಿಸಲಾಗಿದೆ ಎಂದು ಕುಪ್ಪಂಡ ಎಂ.ಚಿಟ್ಟಿಯಪ್ಪ ವಿವರಿಸಿದರು. ಮುಂದಿನ ವರ್ಷ 5 ಕೋಟಿ ರೂ. ಅಂದಾಜು ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ ಎಂದರು.
ಹಿರಿಯ ಸದಸ್ಯರಾದ ಕುಶ ಕುಪ್ಪಂಡ ಗಣೇಶ್, ಬೋಪಣ್ಣ, ಮಾದಪ್ಪ, ಅಪ್ಪಣ್ಣ, ಸಿಇಒ ವಿ.ಕೆ.ಪ್ರತಾಪ್, ಸಂಘದ ಉಪಾಧ್ಯಕ್ಷ ಕಬ್ಬಚ್ಚಿರ ಎಂ.ಸುಬ್ರಹ್ಮಣ್ಯ, ನಿರ್ದೇಶಕರಾದ ಜಮ್ಮಡ ಸಿ.ಮೋಹನ್, ಬೆಲ್ಲತಂಡ ಸಿ.ಮಾದಯ್ಯ, ಚೆಪ್ಪುಡೀರ ಟಿ.ಗಣಪತಿ, ಕಾಡ್ಯಮಾಡ ಪಿ.ದೇವಯ್ಯ, ವೇದಪಂಡ ಬಿ.ಕಿರಣ್, ಕೊಕ್ಕಲೆ ಮಾಡ ಪಾರ್ವತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜನಾರ್ಧನ ಇತರರು ಇದ್ದರು.