

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎ.ಅಣ್ಣೇಗೌಡ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಶಾಂತಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಣ್ಣೇಗೌಡ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವಾಸಿಮ್ ಅವಿರೋಧ ಆಯ್ಕೆ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಪಿ.ಉಮೇಶ್, ಕಾರ್ಯನಿರ್ವಹಣಾಧಿಕಾರಿ ಎ.ಟಿ.ರವಿ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಾದ ನವೀನ್ ಕುಮಾರ್, ಅಕ್ಕನಹಳ್ಳಿ ದಯಾನಂದ್, ಎಂ.ಎಚ್. ಪುಟ್ಟೇಗೌಡ, ಕಂಬಯ್ಯ, ಇತರರು ಸನ್ಮಾನಿಸಿ ಅಭಿನಂದಿಸಿದರು.