ಕೃಷಿ ಪಂಪ್‌ಸೆಟ್‌ಗೆ ನಿತ್ಯ ಐದು ತಾಸು ವಿದ್ಯುತ್

D SUDAKAR D HYR
Published on

ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಐದು ತಾಸು ವಿದ್ಯುತ್ ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸೂಚಿಸಿದ್ದಾರೆಂದು ಬೆಸ್ಕಾಂ ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್ ತಿಳಿಸಿದ್ದಾರೆ.
ವಿದ್ಯುತ್ ಪೂರೈಕೆ ಕುರಿತಂತೆ ಸಚಿವರನ್ನು ಬೆಂಗಳೂರಲ್ಲಿ ಬುಧವಾರ ಭೇಟಿ ಮಾಡಿದ್ದ ಸಂದರ್ಭದಲ್ಲಿ,ಅವರ ನಿರ್ದೇಶನದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ 375 ಕೃಷಿ ಪಂಪ್‌ಸೆಟ್ ಮಾರ್ಗಗಳಿಗೆ ನಿತ್ಯ ಐದು ತಾಸು ಅಥವಾ ಹಗಲು 3 ಗಂಟೆ ಹಾಗೂ ರಾತ್ರಿ 2 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಸಲಾಗುವುದು.
ನೀರಾವರಿ ಮಾರ್ಗಗಳಿಗೆ ನಿತ್ಯ ಐದು ತಾಸು ವಿದ್ಯುತ್ ಪೂರೈಸಬೇಕೆಂಬ ಸರ್ಕಾರ ಆದೇಶದ ಕುರಿತಂತೆ ಸಚಿವ ಸುಧಾಕರ್,ಶಾಸಕರು ಮತ್ತು ರೈತ ಸಂಘಟನೆಗಳ ಪ್ರಮುಖರ ಜತೆ ಈಗಾಗಲೇ ಸಮಾಲೋಚನೆ ಸಭೆ ನಡೆಸಲಾಗಿದೆ ಎಂದರು. ಸಚಿವರ ಭೇಟಿ ವೇಳೆ ಬೆಸ್ಕಾಂ ಚಿತ್ರದುರ್ಗ ವಲಯ ಮುಖ್ಯಇಂಜಿನಿಯರ್ ಕೆ.ವಿ.ಗೋವಿಂದಪ್ಪ, ಕಾರ‌್ಯನಿರ್ವಾಹಕ ಇಂಜಿನಿಯರ್‌ಗಳಾದ ಡಿ.ಜಯಣ್ಣ ಹಾಗೂ ರಾಮಚಂದ್ರಸುತಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net