

ಧಾರವಾಡ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮÁಡಲು ಮುಂದಾಗಿರುವ ಸರ್ಕಾರದ ಸರಿಯಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮೀಟರ್ ಕಿತ್ತು ಹಾಕಿದ ಚಳವಳಿಯಂತೆ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮÁರ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಆರ್‌ಸಿ) ಮೂಲಕ ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ರಾಜ್ಯದಲ್ಲಿ ೪೦ ಲಕ್ಷ ಕೃಷಿಕರು ಬೆಳೆ ಬೆಳೆದರೂ ದರವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಆಧಾರ್ ಲಿಂಕ್ ಮÁಡಿದರೆ ಸಬ್ಸಿಡಿ ನೀಡುವುದಾಗಿ ಇಲ್ಲವೇ ಉಚಿತ ವಿದ್ಯುತ್ ನಿಲ್ಲಿಸುವುದಾಗಿ ಕೆಇಆರ್‌ಸಿ ಆದೇಶ ಮÁಡಿರುವುದು ಸರಿಯಲ್ಲ ಎಂದರು.
ಕಬ್ಬು ದರ ಏರಿಕೆಗಾಗಿ ಕಳೆದ ವರ್ಷ ಸಂಘದಿAದ ೩೯ ದಿನ ಹೋರಾಟ ಮÁಡಲಾಗಿತ್ತು. ರಾಜ್ಯ ಸರ್ಕಾರ ಕಬ್ಬಿನ ಎ-ïಆರ್‌ಪಿ ಹೆಚ್ಚುವರಿ ದರ ಟನ್‌ಗೆ ೧೫೦ ರೂ. ನಿಗದಿ ಮÁಡಿತ್ತು. ಈ ಆದೇಶಕ್ಕೆ ಸಕ್ಕರೆ ಕಾರ್ಖಾನೆಗಳು ನ್ಯಾಯÁಲಯದಲ್ಲಿ ತಡೆಯÁಜ್ಞೆ ತಂದಿದೆ. ಈಗಿನ ಸರ್ಕಾರ ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದರು.
ರೈತರು ಕೃಷಿ ಸಾಲ ತೆಗೆದುಕೊಳ್ಳುವಾಗ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ಕೊಡಬೇಕು ಎನ್ನುವ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಲಕ್ಷಾಂತರ ರೈತರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗದೆ ಖಾಸಗಿ ಲೇವಾದೇವಿದಾರದಿಂದ ದುಬಾರಿ ಬಡ್ಡಿ ಪಾವತಿಸಿ ಸಾಲ ಪಡೆಯಬೇಕಾಗಿದೆ. ಆದ್ದರಿಂದ ಸಿಬಿಲ್ ಸ್ಕೋರ್ ಮÁನದಂಡವನ್ನು ರದ್ದು ಮÁಡಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.