

ಸಂಡೂರು: ಡಿ.ಅಂತಾಪುರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ, ಕೃಷಿ ಇಲಾಖೆ, ಅನುಷ್ಠಾನ ಬೆಂಬಲ ಸಂಸ್ಥೆ, ಗ್ರಮ್ಸ್ ಸಂಸ್ಥೆ ಸಹಯೋಗದಲ್ಲಿ ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆ ಬಗ್ಗೆ ಮಂಗಳವಾರ ಗ್ರಾಮಸಭೆ ನಡೆಯಿತು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಹ ಕಾರ್ಯದರ್ಶಿ ವಿ.ಎಸ್.ಶಂಕರ್ ಮಾತನಾಡಿ, ಪ್ರತಿಯೊಬ್ಬ ರೈತರು ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿ ಹೊಂಡ, ಬದು ನಿರ್ಮಾಣ, ಗೋ ಕಟ್ಟೆ, ದನ-ಕರು, ಕುರಿ ಸಾಕಣೆ ಮಾಡಿಕೊಳ್ಳಬಹುದು. ಮಳೆ ನೀರನ್ನು ಸಂಗ್ರಹ ಮಾಡಿಕೊಂಡು ಕೃಷಿ ಮತ್ತು ತೋಟಗಾರಿಕೆಗೆ ಬೆಳೆಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಹನುಮಕ್ಕ ರೇವಣ್ಣ, ಸದಸ್ಯರಾದ ಯೋಗಪ್ಪ, ಧರಣಿಂದ್ರಮ್ಮ, ಗಂಗಪ್ಪ, ಸಿಬ್ಬಂದಿ ಪಿ.ಎಚ್.ಎರಿಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಎನ್.ಆರ್.ಎಲ್.ಎಮ್ ಸಿಬ್ಬಂದಿ ಕರಿಬಸಪ್ಪ, ಎ.ಕೊಟ್ರೇಶ್, ಎಚ್.ಮಂಜುಳಾ, ಗಾದಿಲಿಂಗಪ್ಪ, ರೈತರು, ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.