ಕೃಷಿ ಕ್ಷೇತ್ರದ ಉಳಿವಿಗೆ ಪ್ರಮುಖ ನಿರ್ಣಯ ಅಂಗೀಕರಿಸಿದ ಕಿಸಾನ್ ಸ್ವರಾಜ್ ಸಮ್ಮೇಳನ

kisan swaraj sammelan
Published on

ಮೈಸೂರು: ಸುಸ್ಥಿರ ಸಮಗ್ರ ಕೃಷಿಗಾಗಿ ಮೈತ್ರಿ ಸಂಸ್ಥೆ (ಆಶ) ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಉಳಿವಿಗೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿತು.

ಪ್ರಮುಖ ನಿರ್ಣಯಗಳು:

  • ರೈತರ ಎಲ್ಲ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕು
  • ಎಲ್ಲರನ್ನು ಒಳಗೊಳ್ಳವನ್ನು ಪರಿಸರಾತ್ಮಕ ಕೃಷಿ ಚಟುವಟಿಕೆಗೆ ಒತ್ತು ನೀಡಬೇಕು
  • ಹೊಲಗಳಲ್ಲಿ ಕೆಲಸ ಮಾಡುವ ನಿಜ ರೈತರನ್ನು ಗುರುತಿಸಬೇಕು
  • ಮಹಿಳಾ ರೈತರು, ಕೃಷಿ ಕಾರ್ಮಿಕರನ್ನು ಗುರುತಿಸುವ ಕಾರ್ಯ ಆಗಬೇಕು
  • ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಬೇಕು
  • ಕೃಷಿ ವೈವಿಧ್ಯತೆ, ಬೀಜ ಸ್ವಾವಲಂಬನೆಗಳನ್ನು ಪುನಶ್ಚೇತನಗೊಳಿಸಬೇಕು
  • ಬಿತ್ತನೆ ಬೀಜಗಳು ರೈತರ ಕೈಯಲ್ಲಿ ಇರಬೇಕು, ಪರಸ್ಪರ ಹಂಚಿಕೆ ಆಗಬೇಕು
  • ಬಿತ್ತನೆ ಬೀಜಗಳು ಬಹುರಾಷ್ಟ್ರೀಯ ಕಂಪನಿ ಹಾಗೂ ಕಾನೂನಿನ ಹಿಡಿತಕ್ಕೆ ಒಳಗಾಗಬಾರದು
  • ನಮ್ಮ ಜೀವವೈವಿಧ್ಯ ನಾಶ ಮಾಡುವ ಕುಲಾಂತರಿ ತಂತ್ರಜ್ಞಾನಕ್ಕೆ ಕಡಿವಾಣ ಹಾಕಬೇಕು
  • ಸ್ವತಂತ್ರ ವ್ಯಾಪಾರ ನೀತಿಯು ರೈತರನ್ನು, ವೈವಿಧ್ಯಮಯ ಕೃಷಿ ಹಾಗೂ ಪರಿಸರಾತ್ಮಕ ಕೃಷಿಯನ್ನು ಕೊಲ್ಲುವಂತಿರಬಾರದು
  • ಅನ್ನದಾತರ ವಾಸ್ತವ ಸ್ಥಿತಿ ಅರಿಯಲು ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವೆ ಸಂಬಂಧ ಏರ್ಪಡಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net