ಕೃಷಿ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಿ

MDG ind
ಮೂಡಿಗೆರೆ ಬೆಳೆಗಾರರ ಸಂಘ ಮತ್ತು ನಗರ ಟೈಲರ್ ಸಮಿತಿಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಬಿ.ಆರ್.ಬಾಲಕೃಷ್ಣ, ಹಳಸೆ ಶಿವಣ್ಣ, ಬಿ.ಎಸ್.ಜಯರಾಂ, ಉಮಾ ಶಂಕರ್, ಶಿವೇಗೌಡ, ನರಸಿಂಹ, ಷಣ್ಮುಖಾನಂದ ಇತರರಿದ್ದರು.
Published on

ಮೂಡಿಗೆರೆ: ಕೃಷಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಗಳು ಕೃಷಿ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಂಡಾಗ ಮಾತ್ರ ಇನ್ನಷ್ಟು ಸುಭದ್ರವಾಗಿರುತ್ತದೆ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದರು.

ತಾಲೂಕು ಬೆಳೆಗಾರರ ಸಂಘ ಮತ್ತು ನಗರ ಟೈಲರ್ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಅಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿ ಗುರುತಿಸಿಕೊಂಡಿದೆ. ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನಮ್ಮ ದೇಶದ ಸಾಧನೆಯನ್ನು ಕಂಡು ವಿಶ್ವವೇ ಬೆರಗಾಗಿದೆ ಎಂದರು.

ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ.ಮನೋಹರ್, ಬಿ.ಎಸ್.ಜಯರಾಂ, ಜಿ.ಎಚ್.ಹಾಲಪ್ಪಗೌಡ, ಮೋಹನ್ ಲಾಲ್ ಜೈನ್, ಡಿ.ಎಸ್.ರಘು, ರೇವಣ್ಣಗೌಡ, ಬಿ.ಬಸವರಾಜು, ಬ್ರಿಜೇಶ್, ಉಮಾ ಶಂಕರ್, ಎಚ್.ಎಂ.ಶಿವೇಗೌಡ, ಮನು, ಪೂರ್ಣೇಶ್, ನರಸಿಂಹ, ಬಸವರಾಜ್, ಮಂಜುಳಾ, ಗಿರೀಶ್, ಮಂಜು, ಷಣ್ಮುಖಾನಂದ, ಪ್ರಕಾಶ್, ಶ್ರುತಿ, ಗೋಪಾಲ್, ಯೋಗೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net