ಕೃಷಿ ಕೆಲಸಕ್ಕೆ ಜಿಟಿ ಜಿಟಿ ಸೋನೆ ಮಳೆ ಅಡ್ಡಿ

6ark4
module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 124.0;
Published on

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು ರೈತರ ಕೃಷಿ ಕೆಲಸಗಳಿಗೆ ಸಮಸ್ಯೆ ಸೃಷ್ಟಿಸಿದೆ.

ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಬೀಳುತ್ತಿರುವ ಜಿಟಿ ಜಿಟಿ ಸೋನೆ ಮಳೆ ಕೃಷಿ ಕೆಲಸಗಳಿಗೆ ಹಲವು ಅವಾಂತರ ಸೃಷ್ಟಿಸಿದೆ. ರೈತರು ತಂಬಾಕು ಬೆಳೆಯಲ್ಲಿ ನಿಂತಿರುವ ನೀರನ್ನು ಬಸಿ ಕಾಲುವೆ ತೆಗೆದು ಹೊರ ಕಳಿಸುತ್ತಿದ್ದಾರೆ. ತಗ್ಗು ಪ್ರದೇಶದಲ್ಲಿ ನಿಂತಿರುವ ನೀರು ಹೊರ ಹೋಗದೆ ಬೆಳೆ ಕೊಳೆಯುತ್ತಿದೆ.

ಮಳೆಯಿಂದಾಗಿ ಆಲೂಗಡ್ಡೆ, ಜೋಳ ಮತ್ತಿತರ ಬೆಳೆಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಅತಿಯಾದ ತೇವಾಂಶದಿಂದ ಹೊಗೆಸೊಪ್ಪು ಗಿಡಗಳು ಬೆಳವಣಿಗೆ ಕಾಣದೆ ಸೊರಗಿದ್ದು, ಇಳುವರಿ ಕುಂಠಿತವಾಗಿದೆ. ಮಳೆಯನ್ನು ಲೆಕ್ಕಿಸದೆ ಗಿಡಗಳಲ್ಲಿ ಹಣ್ಣಾಗುತ್ತಿರುವ ಎಲೆಗಳ ಕಟಾವು ಕಾರ್ಯ ನಡೆಸುವಂತಾಗಿದೆ ಎನ್ನುತ್ತಾರೆ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net