ಕೃಷಿ ಇಲಾಖೆ ಅಧಿಕಾರಿಗಳಿಂದ ಬೆಳೆ ನಾಶ ಪರಿಶೀಲನೆ

ಮದ್ದೂರು ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ರೈತ ಲಕ್ಷ್ಮಣ್ ಅವರ ಕಬ್ಬಿನ ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪರಮೇಶ, ಮೋಹನ್, ಗವಾಸ್ಕರ್ ಇದ್ದರು.
02M.D.R.1
Published on

ಮದ್ದೂರು: ಚನ್ನಸಂದ್ರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ರೈತ ಲಕ್ಷ್ಮಣ್ ಅವರ ಕಬ್ಬಿನ ಗದ್ದೆಗೆ ಕೃಷಿ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.


ಗುರುವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಬಂದ ಪರಿಣಾಮ ಚನ್ನಸಂದ್ರ ಗ್ರಾಮದ ಲಕ್ಷ್ಮಣ್ ಅವರ ಕಬ್ಬಿನ ಗದ್ದೆಗೆ ನೀರು ನುಗ್ಗಿ ಬೆಳೆ ನಾಶವಾಗಿ 2 ಲಕ್ಷ ರೂ. ನಷ್ಟ ಸಂಭವಿಸಿತ್ತು. ಹೀಗಾಗಿ ಕೃಷಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಕೊಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.\


ನಂತರ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಮಳೆ ನೀರು ಭತ್ತದ ಬೆಳೆಗೆ ನುಗ್ಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ ಮಾತನಾಡಿ, ಬೆಳೆಯಿಂದ ನಾಶವಾಗಿರುವ ಬೆಳೆಗಳ ಬಗ್ಗೆ ಸರ್ವೇ ಮಾಡಿ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ರೈತ ಲಕ್ಷ್ಮಣ್, ಅಧಿಕಾರಿಗಳಾದ ರೂಪಾ ಗವಾಸ್ಕರ್, ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net