ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ಅಗತ್ಯ

25 HANUR 1
ಕಾಮಗೆರೆಯ ಮೈರಾಡ ಡೇವಿನ್‌ಸನ್ ಟ್ರೈನಿಂಗ್ ಸಿಡಾರ್ ಸಂಸ್ಥೆಯಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ರೋಮಾ ಕೋರ್ಸ್ ತರಬೇತಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಡಾ.ಕಲ್ಪನಾ, ಅಶ್ರಫುಲ್ ಹಸನ್, ಸೈಯದ್ ಅಜ್ಮಲ್ ಪಾಷ, ನಾಗರಾಜು ಇತರರು ಇದ್ದರು.
Published on

ಜಿವಿಕೆಕೆ ಸಂಸ್ಥೆಯ ಸಮನ್ವಯ ಅಧಿಕಾರಿ ಡಾ.ಬಿ. ಕಲ್ಪನಾ ಅಭಿಮತ

ಹನೂರು: ರೈತರಿಗೆ ಗುಣಮಟ್ಟದ ಪರಿಕರಗಳನ್ನು ವಿತರಿಸುವುದರ ಜತೆಗೆ, ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಬೆಂಗಳೂರು ಜಿವಿಕೆಕೆ ಸಂಸ್ಥೆಯ ಸಮನ್ವಯ ಅಧಿಕಾರಿ ಡಾ.ಬಿ. ಕಲ್ಪನಾ ತಿಳಿಸಿದರು.

ಕಾಮಗೆರೆ ಮೈರಾಡ ಡೇವಿನ್‌ಸನ್ ಟ್ರೈನಿಂಗ್ ಸಿಡಾರ್ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್ ತರಬೇತಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ರೈತ ದೇಶದ ಬೆನ್ನೆಲುಬಾಗಿದ್ದು, ಅನ್ನದಾತರಾಗಿದ್ದಾರೆ. ಹಾಗಾಗಿ, ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ನೀಡುವುದರ ಮೂಲಕ ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕು. ಸಾವಯವ ಕೃಷಿಯನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಜತೆಗೆ, ಪ್ರಮಾಣಪತ್ರ ಪಡೆದಿರುವ ಪ್ರತಿಯೊಬ್ಬರೂ ಅರೆ ವಿಸ್ತರಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

39 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಮೈರಾಡ ಸಂಸ್ಥೆ ಮುಖ್ಯಸ್ಥ ಅಶ್ರಫುಲ್ ಹಸನ್, ಕಾರ್ಯಕ್ರಮಾಧಿಕಾರಿ ಸೈಯದ್ ಅಜ್ಮಲ್ ಪಾಷ, ನಿವೃತ್ತ ಪ್ರಾಂಶುಪಾಲ ಡಾ.ಎಚ್.ಟಿ. ನಾಗರಾಜು, ಚಾ.ನಗರ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಉಮಾಶಂಕರ್, ಕುಮಾರ್, ಕೃಷಿ ಅನುವುಗಾರ ಸಿ.ಎಂ. ಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net