ಕೃಪಾ ಆರೋಗ್ಯ, ಸಮಾಜ ಸೇವಾ ಸಂಸ್ಥೆ ಸೇವೆ ಅಪಾರ

19Athni1
Published on

ಅಥಣಿ: ಅನಾಥ ಮಕ್ಕಳ ಸೇವೆ, ದೇವರ ಸೇವೆ ಅಂತಹ ಕಾರ್ಯ ಮಾಡುತ್ತಿರುವ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ಸೇವೆ ಶ್ಲಾಘನೀಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ರಾಯಲ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ೧೫ನೇ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿಜಪ್ಪ ಹಿರೇಮನಿ ದಂಪತಿ ಕಾರ್ಯ ಮೆಚ್ಚುವಂತದ್ದು ಎಂದರು.

ಡಾ.ರಾಮ ಕುಲಕರ್ಣಿ ಮಾತನಾಡಿ, ಎಚ್‌ವಿವಿ ಪೀಡಿತ ಮಕ್ಕಳಿಗೆ ಊಟ, ವಸತಿ ಮತ್ತು ಶಿಕ್ಷಣ ನೀಡುತ್ತಿರುವ ಇವರ ಸಮಾಜಮುಖಿ ಸೇವೆಯನ್ನು ಸರ್ಕಾರ ಗುರುತಿಸಬೇಕು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ನಿಜಪ್ಪ ಹಿರೇಮನಿ ಮಾತನಾಡಿ, ಅನಾಥ ಮಕ್ಕಳ ಹಾಗೂ ಮಾನಸಿಕ ರೋಗಿಗಳ ಸೇವೆ ಮಾಡುವುದು ನನ್ನ ಸೌಭಾಗ್ಯ ಎಂದರು.

ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸಂಗೀತಾ ಹಿರೇಮನಿ, ಅರುಣ ಯಲಗುದ್ರಿ, ಸಿದ್ದಾರ್ಥ ಸಿಂಗೆ, ನಂದಕಿಶೋರ ಗೌಡರ, ಶ್ಯಾಮ ಪೂಜಾರಿ, ಚೇತನ ಅಹಿಂಸಾ, ನವೀನ ಗಂಗರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net