ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಡಿ.9ರಂದು

BOOK-MY-SHOW-copy
Published on

ಕಲಬುರಗಿ: ನಗರದ ಅಂಬಾಸ್ಮÊತಿ ಪ್ರಕಾಶನದಿಂದ ನಗರದ ಬಿದ್ದಾಪುರ ಕಾಲನಿಯಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಡಾ.ಅರಳು ಮಲ್ಲಿಗೆ ಅವರ ಸಾರ್ಥಕ ಬದುಕಿನ ಯಶೋಗಾಥೆ ಕುರಿತ ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಡಿ.೯ರಂದು ಸಂಜೆ ೫ಕ್ಕೆ ನಡೆಯಲಿದೆ ಎಂದು ಪ್ರಕಾಶನದ ಅಧ್ಯಕ್ಷ ಡಾ.ಲಕ್ಷಿö್ಮÃಕಾಂತ ಮೊಹರೀರ ತಿಳಿಸಿದರು.

ದಾಸ ಸಾಹಿತ್ಯ ವಿದ್ವಾಂಸ ಡಾ.ಶ್ರೀನಿವಾಸ ಸಿರನೂರಕರ್ ಅಧ್ಯಕ್ಷತೆ ವಹಿಸಲಿದ್ದು, ಡಾ.ಸ್ವಾಮಿರಾವ ಕುಲ್ಕರ್ಣಿ ಕೃತಿ ಪರಿಚಯಿಸಲಿದ್ದಾಎರ. ಅತಿಥಿಗಳಾಗಿ ಸಂಧ್ಯಾ ಹೊನಗುಂಟಿಕರ್, ಡಾ.ಭುರ್ಲಿ ಪ್ರಲ್ಹಾದ್, ಪಾಂಡುರAಗರಾವ ಕಂಪ್ಲಿ ಸೇರಿ ಗಣ್ಯರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕಾಶನದ ಉಪಾಧ್ಯಕ್ಷ ಡಾ.ಗುರುರಾಜ ಮೊಹರೀರ ಮಾತನಾಡಿ, ದಾಸಸಾಹಿತ್ಯ ಪ್ರಚಾರಕರಾದ ಅರುಂಧತಿ ದೇಶಮುಖ, ಶೋಭಾ ದೇಸಾಯಿ, ಡಾ.ವಿರಜಾ ಕಂಪ್ಲಿ, ಅನಂತರಾಜ ಮಿಸ್ತಿç ಅವರಿಗೆ ೨೦೨೪ರ ಸಾಲಿನ ದಾಸಾಮೃತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಗರದ ಮಹಾಲಕ್ಷಿö್ಮÃ, ಶಾರದಾ ಶಂಕರ, ಪ್ರಭಂಜನ, ಶ್ರೀ ಲಕ್ಷಿö್ಮÃ, ಪ್ರಸನ್ನ ಮಾರುತಿ ಭಜನಾ ಮಂಡಳಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ನಿರುಪಮಾ ಗುರುರಾಜ ಮಾತನಾಡಿ, ೪೫೬ ಪುಟದ ಕೃತಿಯು ೩ನೇ ಮುದ್ರಣವಾಗುತ್ತಿದೆ. ೨೩ ರಾಷ್ಟçಗಳಲ್ಲಿ ಪ್ರಕಟವಾಗಿದೆ. ಸುಂದರ ಪದಪುಂಜಗಳೊAದಿಗೆ ಸಾರ್ಥಕ ಸಂದೇಶಗಳನ್ನು ಹೊತ್ತಿರುವ ಕೃತಿ ಇದಾಗಿದೆ ಎಂದು ತಿಳಿಸಿದರು.

ಸಂಚಾಲಕ ಮುರಳಿಧರ ಕರಲಗಿಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net