

ಯುವ ಕವಿ ವಿಶ್ವ ಕಮ್ಮಾರ ವಿರಚಿತ ‘ನನ್ನಾಕಿ’ ಕವನ ಸಂಕಲನದ ಬಿಡುಗಡೆ ಹಾಗೂ ಡಾ. ವಿ.ಸಿ.ಐರಸಂಗ ವಿರಚಿತ ಕವನಗಳ ‘ಗೀತ ಗಾಯನ’ ಸಮಾರಂಭ ಜು. 23ರಂದು ಸಂಜೆ 4ಕ್ಕೆ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ನಡೆಯಲಿದೆ ಎಂದು ಪ್ರಾಧ್ಯಾಪಕಿ ಡಾ. ರತ್ನಾ ಐರಸಂಗ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಯಾಗಿ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಭಾಗವಹಿಸಲಿದ್ದಾರೆ. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸುವರು. ರಂಗಕರ್ಮಿಕ ಡಾ. ಶಶಿಧರ ನರೇಂದ್ರ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಪ್ರಕಾಶ ಉಡಕೇರಿ ಸೇರಿ ಇತರರು ಉಪಸ್ಥಿತರಿರುವರು ಎಂದರು.
ನನ್ನಾಕಿ ಕವನ ಸಂಕಲನವನ್ನು ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಬಿಡುಗಡೆಗೊಳಿಸಲಿದ್ದು, ಡಾ. ತ್ನಾ ಐರಸಂಗ ಕೃತಿ ಬಗ್ಗೆ ಮಾತನಾಡಲಿದ್ದಾರೆ. ಸುಜಾತಾ ರಾಯ್ಕರ ಹಾಗೂ ಶಿಷ್ಯವೃಂದ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ. 108 ಬಾರಿ ರಕ್ತದಾನ ಮಾಡಿದ 75 ವರ್ಷದ ಚಂದ್ರಶೇಖರ ರಾಯರ ಹಾಗೂ 4000ಕ್ಕೂ ಹೆಚ್ಚು ನೇತ್ರ ಚಿಕಿತ್ಸೆಗೆ ಸಹಾಯ ಮಾಡಿದ ಶಾಂತಾರಾವ ಬೋಸಲೆ ಅವರನ್ನು ಸನ್ಮಾನಿಸಲಾಗುವುದು ಎಂದರು.
ಡಾ.ವಿ.ಸಿ.ಐರಸಂಗ ಟ್ರಸ್ಟ್ ಉಪಾಧ್ಯಕ್ಷ ಶಶಿಧರ ಉಜ್ಜಿನಿ, ಪ್ರಕಾಶ ಅಂತಣ್ಣವರ ಇದ್ದರು.